ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸ್ವಯಂವರ' ನಕಲಿ ಆರೋಪ; ರಾಖಿ ಮತ್ತಿತರರ ಮೇಲೆ ಕೇಸ್ (Rakhi Sawant | Rakhi ka Swayamvar | NDTV imagine | Gaurav Tiwari)
 
IFM
ಖಾಸಗಿ ವೆಬ್‌ಸೈಟ್‌ವೊಂದರ ಪರಿಕಲ್ಪನೆಯನ್ನು ಎನ್‌ಡಿಟೀವಿ ಇಮ್ಯಾಜಿನ್ ಚಾನೆಲ್ ತನ್ನ 'ರಾಖಿ ಕಾ ಸ್ವಯಂವರ್' ಕಾರ್ಯಕ್ರಮದಲ್ಲಿ ನಕಲು ಮಾಡಿದ ಆರೋಪದ ಮೇಲೆ ಐಟಂ ಗರ್ಲ್ ರಾಖಿ ಸಾವಂತ್, ನಟ ರವಿ ಕಿಶನ್ ಸೇರಿದಂತೆ ಆರು ಮಂದಿಯ ಮೇಲೆ ಎಫ್‌ಐ‌ಆರ್ ದಾಖಲಿಸಿಕೊಳ್ಳಲು ಸ್ಥಳೀಯ ನ್ಯಾಯಾಲಯವೊಂದು ಪೊಲೀಸರಿಗೆ ಆದೇಶಿಸಿದೆ.

ತನ್ನ ವೆಬ್‌ಸೈಟ್‌ನಿಂದ ಸ್ವಯಂವರದ ಕಲ್ಪನೆಯನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂದು ಪಿಂಕ್ ಸಿಟಿ ಆಧರಿತ 'ಸ್ಟ್ರಗ್ಲಿಂಗ್' ಖ್ಯಾತಿಯ ಬರಹಗಾರ ಗೌರವ್ ತಿವಾರಿಯವರು ನ್ಯಾಯಾಲಯಕ್ಕೆ ದೂರಿಕೊಂಡಿದ್ದರು.

ನಕಲಿ ಆರೋಪದ ಹಿನ್ನಲೆಯಲ್ಲಿ ರಾಖಿ ಸೇರಿದಂತೆ ಆರು ಮಂದಿಯ ವಿರುದ್ಧ ಎಫ್‌ಐ‌ಆರ್ ದಾಖಲಿಸುವಂತೆ ನಗರದ ಕಾರ್ನಿ ನಗರ ಪೊಲೀಸ್ ಠಾಣೆಗೆ ನ್ಯಾಯಾಧೀಶರಾದ ಶಿಲ್ಪಾ ಸಮೀರ್ ಆದೇಶಿಸಿದ್ದಾರೆ.

ರಾಖಿ ಮತ್ತು ಕಿಶನ್ ಜತೆಗೆ ಎನ್‌ಡಿಟೀವಿ ಇಮ್ಯಾಜಿನ್‌ನ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗಾಂಧಿ, 'ರಾಖಿ ಕಾ ಸ್ವಯಂವರ್' ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇತರ ಇಬ್ಬರ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ.

ಕಾರ್ಯಕ್ರಮದ ಕಲ್ಪನೆ ಮತ್ತು 'ಸ್ವಯಂವರ' ಎಂಬ ಪದದ ಮೂಲ ಹಕ್ಕುಗಳು ತನ್ನಲ್ಲಿದ್ದು, ಇದನ್ನು 2008ರಲ್ಲಿ ಖಾಸಗಿ ವಾಹಿನಿಯೊಂದಕ್ಕೆ ತೋರಿಸಿದ್ದೆ. ಅದೇ ಕಲ್ಪನೆಯನ್ನು 'ರಾಖಿ ಕಾ ಸ್ವಯಂವರ್' ರಿಯಾಲಿಟಿ ಕಾರ್ಯಕ್ರಮದಲ್ಲಿ ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ ತಿವಾರಿಯವರು ಆರೋಪಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ