ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಾಲ್‌ಗರ್: ಶಂಕಿತ ನಕ್ಸಲರಿಂದ ಜಂಟಿಪಡೆ ಶಿಬಿರದ ಮೇಲೆ ದಾಳಿ (Maoists attack | joint force | Lalgarh | Midnapore)
 
ಲಾಲ್‌ಗರ್‌ನ ಶಾಲಾ ಕಟ್ಟಡ ಒಂದರಲ್ಲಿ ನಡೆಯುತ್ತಿರುವ ಜಂಟಿ ಪಡೆಗಳ ಶಿಬಿರದ ಮೇಲೆ ಗುರುವಾರ ರಾತ್ರಿ ಶಂಕಿತ ನಕ್ಸಲರು ಬಾಂಬ್ ಹಾಗು ಗುಂಡಿನ ದಾಳಿ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಲಾಲ್‌ಗರ್ ಪೊಲೀಸ್ ಠಾಣೆಯಿಂದ ಅಲ್ಪ ದೂರದಲ್ಲಿರುವ ರಾಮಕೃಷ್ಣ ವಿದ್ಯಾಲಯದಲ್ಲಿ ನಡೆಯುತ್ತಿರುವ ಶಿಬಿರದ ಮೇಲೆ ರಾತ್ರಿ ಸುಮಾರು ಹತ್ತುಗಂಟೆಯ ವೇಳೆಗೆ ಈ ದಾಳಿ ಸಂಭವಿಸಿದೆ. ಶಿಬಿರದಲ್ಲಿನ ಪಡೆಗಳೂ ಪ್ರತಿದಾಳಿ ನಡೆಸಿದಾಗ ದಾಳಿಕೋರರು ಪರಾರಿಯಾಗಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.

ಲಾಲ್‌ಗರ್‌ನಲ್ಲಿ ನಿಯೋಜಿತವಾಗಿರುವ ಕೇಂದ್ರೀಯ ಪಡೆಗಳನ್ನು ಹಿಂತೆಗೆಯಬೇಕೆಂದು ಒತ್ತಾಯಿಸಿ ಇಬ್ಬರು ಕೇಂದ್ರ ಸಚಿವರು ಸೇರಿದಂತೆ ತೃಣಮೂಲ ಕಾಂಗ್ರೆಸ್‌ನ ತ್ರಿಸದಸ್ಯ ತಂಡವು ಅಲ್ಲಿಗೆ ಭೇಟಿ ನೀಡಿದ ಬಳಿಕ ಈ ದಾಳಿ ಸಂಭವಿಸಿದೆ.
ಅದಲ್ಲದೆ, ಮಂಗಳವಾದಂದು ಬುಡಕಟ್ಟು ಮಹಿಳೆಯರು ಮೆರವಣಿಗೆ ನಡೆಸುತ್ತಿದ್ದ ವೇಳೆ ಅವರಿಗೆ ಲಾಠಿಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಲಾಗಿತ್ತು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ