ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಕ್ಕಳಿಗೆ ಎಚ್‌ಐವಿ; ತಮಿಳುನಾಡು ಮುಂದು! (Karnataka | India | HIV | AIDS)
 
ದೇಶದಲ್ಲಿ ಸುಮಾರು 53,000 ಮಕ್ಕಳು ಹೆಚ್‌ಐವಿ ಪಾಸಿಟಿವ್ ಬಾಧಿತರಾಗಿದ್ದು, ಇತರೆಲ್ಲಾ ರಾಜ್ಯಗಳಿಗಿಂತ ತಮಿಳುನಾಡು ಈ ಬಾರಿ ಅತೀ ಹೆಚ್ಚಿನ (2,651) ಪ್ರಕರಣಗಳನ್ನು ದಾಖಲಿಸಿದೆ. ಕರ್ನಾಟಕ ಈ ವರ್ಷ ಕಡಿಮೆ ಪ್ರಕರಣಗಳಿಗೆ ಸಾಕ್ಷಿಯಾಗಿದ್ದರೂ ಒಟ್ಟಾರೆ ನಾಲ್ಕನೇ ಸ್ಥಾನ ಉಳಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಗುಲಾಮ್ ನಬಿ ಅಜಾದ್ ಲೋಕಸಭೆಗೆ ತಿಳಿಸಿದ್ದಾರೆ.

ದೇಶದಾದ್ಯಂತ 2006ರಲ್ಲಿ ಒಟ್ಟು 2,253 ಮಕ್ಕಳಿಗೆ ಹೆಚ್‌ಐವಿ ತಗುಲಿದ್ದ ಪ್ರಕರಣಗಳು ವರದಿಯಾಗಿತ್ತು. ಆದರೆ 2007ರಲ್ಲಿ 24,977 ಹಾಗೂ 2008ರಲ್ಲಿ 19,116 ಪ್ರಕರಣಗಳು ದಾಖಲಾಗಿವೆ.
PR


ಮೇ 2009ರ ಹೊತ್ತಿಗೆ ದೇಶದಲ್ಲಿ ಒಟ್ಟಾರೆ ಹೆಚ್‌ಐವಿ ಪಾಸಿಟಿವ್ ಮಕ್ಕಳ ಸಂಖ್ಯೆ 52,973ಕ್ಕೆ ತಲುಪಿದೆ. 2009ರಲ್ಲಿ ದಾಖಲಾದ ಒಟ್ಟು ಪ್ರಕರಣಗಳು 6,627 ಎಂದು ಆಜಾದ್ ವಿವರಿಸಿದ್ದಾರೆ.

ಬಹುತೇಕ ಪ್ರಕರಣಗಳಲ್ಲಿ ಗರ್ಭಿಣಿ ತಾಯಂದಿರಿಂದ ಮಕ್ಕಳಿಗೆ ಎಚ್‌ಐವಿ ಬಳುವಳಿಯಾಗಿ ಬಂದಿದೆ. ದೇಶದಲ್ಲಿ ಪ್ರಸಕ್ತ 25 ಲಕ್ಷ ಎಚ್‌ಐವಿ/ಏಡ್ಸ್ ಪೀಡಿತ ಪ್ರಕರಣಗಳು ವರದಿಯಾಗಿವೆ.

ಇದರಲ್ಲೂ ತಮಿಳುನಾಡು ಮುಂದು!
ರಾಜ್ಯಗಳ ನಡುವೆ ತುಲನೆ ನಡೆಸಿದಾಗ ತಮಿಳುನಾಡಿನಲ್ಲಿ ಅತೀ ಹೆಚ್ಚು ಮಕ್ಕಳಿಗೆ ಎಚ್‌ಐವಿ ಬಾಧಿಸಿರುವುದು ಗಮನಕ್ಕೆ ಬಂದಿದೆ. 2008ರಲ್ಲಿ ಈ ರಾಜ್ಯದಿಂದ 2,446 ಪ್ರಕರಣಗಳು ದಾಖಲಾಗಿದ್ದರೆ, ಈ ಬಾರಿ ಅದು 2,651ಕ್ಕೇರಿದೆ.

ನಂತರದ ಸ್ಥಾನವನ್ನು ಮಹಾರಾಷ್ಟ್ರ ಪಡೆದುಕೊಂಡಿದೆ. 2008ರಲ್ಲಿ 4,714 ಪ್ರಕರಣಗಳೊಂದಿಗೆ ದೇಶದಲ್ಲೇ ಅಗ್ರ ಸ್ಥಾನ ಪಡೆದುಕೊಂಡಿದ್ದ ಈ ರಾಜ್ಯ ಪ್ರಸಕ್ತ ವರ್ಷದ ಮೇ ತಿಂಗಳವರೆಗೆ 1,269 ಪ್ರಕರಣಗಳಷ್ಟೇ ವರದಿಯಾಗಿದೆ.

2007ರಲ್ಲಿ ದಾಖಲೆಯ 6,460 ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ಆಂಧ್ರಪ್ರದೇಶ ಪ್ರಸಕ್ತ ವರ್ಷ ಸಾಕಷ್ಟು ಸುಧಾರಣೆ ಕಂಡಿದ್ದು, ಕೇವಲ 748 ಪ್ರಕರಣಗಳಷ್ಟೇ ಇದುವರೆಗೆ ದಾಖಲಾಗಿದೆ.

2008ರಲ್ಲಿ 2452 ಮಕ್ಕಳ ಹೆಚ್‌ಐವಿ ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ಕರ್ನಾಟಕ ಈ ಬಾರಿ ಇದುವರೆಗೆ ಕೇವಲ 356 ಪ್ರಕರಣವನ್ನಷ್ಟೇ ದಾಖಲಿಸಿದೆ. 2006ರಲ್ಲಿ 79, 2007ರಲ್ಲಿ 3613 ಪ್ರಕರಣಗಳು ಕರ್ನಾಟಕದಿಂದ ವರದಿಯಾಗಿತ್ತು.

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಿಂದ ಯಾವುದೇ ಪ್ರಕರಣಗಳು ಈ ವರ್ಷ ವರದಿಯಾಗಿಲ್ಲ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ