ಮಹಿಳೆಯರು ಹೊರಗಡೆ ತೆರಳುವ ವೇಳೆಗೆ ತಮ್ಮ ಬಳಿ ಮೆಣಸಿನ ಪುಡಿ, ಚಾಕು, ಬ್ಲೇಡುಗಳನ್ನು ಇರಿಸಿಕೊಳ್ಳಿ ಎಂದು ಗುಜರಾತ್ ಪೊಲೀಸ್ ಮಹಾನಿರ್ದೇಶಕ ಎಸ್.ಎಸ್. ಖಂಡ್ವಾಲ ಅವರು ಸಲಹೆ ಮಾಡಿದ್ದಾರೆ.
ಹುಡುಗಿಯರು ಲೈಂಗಿಕ ಕಿರುಕುಳದಾರರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬ್ಲೇಡು, ಚಾಕು ಹಾಗೂ ಮೆಣಸಿನ ಪುಡಿ ಇರಿಸಿಕೊಳ್ಳಿ ಎಂಬುದಾಗಿ ಅವರು ಮಾಧ್ಯಮಗಳ ಮೂಲಕ ಸಲಹೆ ನೀಡಿದ್ದಾರೆ.
ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಅವರ ಈ ಸಲಹೆ ಹೊರಬಿದ್ದಿದೆ. ಹಿಂದಿನ ದಿನಗಳಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಕೆಲವೇ ಪ್ರಕರಣಗಳು ದಾಖಲಾಗುತ್ತಿದ್ದರೆ, ರಾಷ್ಟ್ರದಲ್ಲಿ ಇತ್ತೀಚೆಗೆ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು ಆಕೆ ಈಗ ಜೀನ್ಮರಣದೊಂದಿಗೆ ಹೋರಾಡುತ್ತಿದ್ದಾಳೆ.
ದಿನನಿತ್ಯ ಎಂಬಂತೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇರುವುದು ತೀವ್ರ ಆತಂಕಕಾರಿ ವಿಚಾರ. ಮಹಿಳೆಯರ ಮೇಲೆ ನಡೆಯುವ ಈ ಲೈಂಗಿಕ ಹಲ್ಲೆಯನ್ನು ತಡೆಯಲು ಗಂಭೀರ ಕ್ರಮಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಡಿಜಿಪಿಯವರ ಸಲಹೆ ಪ್ರಾಯೋಗಿಕವಾಗಿದೆ.