ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಂಪಿ ಸರ್ಕಾರದಿಂದ ಕೇಸರೀಕರಣ ಯತ್ನ (Madhya Pradesh | saffronisation | education | Bhoojan Mantra)
 
ರಾಜ್ಯಾದ್ಯಂತ ಶಾಲೆಗಳಲ್ಲಿ ಪ್ರಾರ್ಥನಾ ಮಂತ್ರ ಪಠಣವನ್ನು ಕಡ್ಡಾಯಗೊಳಿಸ ಹೊರಟಿರುವ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಕ್ರಮವು ಹಲವು ಹುಬ್ಬುಗಳನ್ನು ಮೇಲೇರಿಸಿದೆ. ಇದು ಶೈಕ್ಷಣಿಕ ಪದ್ಧತಿಯ ಕೇಸರೀಕರಣವಲ್ಲದೇ ಮತ್ತೇನಲ್ಲ ಎಂಬುದಾಗಿ ಧಾರ್ಮಿಕ ಗುಂಪುಗಳು ಆಪಾದಿಸಿವೆ.

ರಾಜ್ಯದ ಸರಸ್ವತಿ ವಿದ್ಯಾಮಂದಿರದ ವಿದ್ಯಾರ್ಥಿಗಳು ಊಟಕ್ಕೆ ಮುಂಚಿತವಾಗಿ 'ಭೋಜನ ಮಂತ್ರ'ವನ್ನು ಪಠಿಸುತ್ತಾರೆ. ಅದಾಗ್ಯೂ, ಮುಂಬರುವ ಶಿಕ್ಷಕರ ದಿನಾಚರಣೆಯಿಂದ, ಅಂದರೆ ಸೆಪ್ಟೆಂಬರ್ 5ರ ಬಳಿಕ ಇದು ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಲಿದೆ.

"ಪ್ರಾರ್ಥನೆಗಳು ಸಮಾಜದ ಒಳಿತಿಗಾಗಿ ತೇಜಸ್ಸನ್ನು ಹರಿಸುತ್ತವೆ" ಎಂಬುದಾಗಿ ಮಧ್ಯಪ್ರದೇಶದ ಶಿಕ್ಷಣ ಸಚಿವೆ ಅರ್ಚನ ಚಿಟ್ನಿಸ್ ಹೇಳುತ್ತಾರೆ.

ಆದರೆ ಅವರ ಈ ಸಮರ್ಥನೆಯನ್ನು ಕೇಳಲು ಅಲ್ಪಸಂಖ್ಯಾತ ಸಮುದಾಯಗಳು ಸಿದ್ಧವಿಲ್ಲ. ಮುಸ್ಲಿಂ ತೆಹೋವಾರ್ ಸಮಿತಿಯ ಅಧ್ಯಕ್ಷ ಶಾಹ್ಮಿರಿ ಕುರ್ರಂ ಅವರು "ನಮ್ಮ ಧಾರ್ಮಿಕ ವಿಚಾರದಲ್ಲಿ ಯಾವುದೇ ಹಸ್ತಕ್ಷಪವನ್ನು ನಾವು ಸಹಿಸುವುದಿಲ್ಲ" ಎಂದು ಹೇಳಿದ್ದಾರೆ.

ಇದೇವೇಳೆ, ಮಧ್ಯಪ್ರದೇಶ ಕ್ರಿಶ್ಚಿಯನ್ ಸಂಘಟನೆಯ ಅಧ್ಯಕ್ಷೆ ಇಂದಿರಾ ಅಯ್ಯಂಗಾರ್ ಅವರು "ಇದನ್ನು ಕಡ್ಡಾಯಗೊಳಿಸಿದರೆ ಎಲ್ಲಾ ಸಮುದಾಯಗಳೂ ಇದರಿಂದ ಸಂತಸಗೊಳ್ಳವು" ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಕೇಸರೀಕರಣವು ಹೊಸದೇನಲ್ಲ. ಕಳೆದ ವರ್ಷ ಮಧ್ಯಪ್ರದೇಶ ಸರ್ಕಾರವು ಶಾಲೆಗಳಲ್ಲಿ ಯೋಗಾಭ್ಯಾಸ ಆರಂಭಿಸಿತ್ತು. ವಿದ್ಯಾರ್ಥಿಗಳು ದಿನನಿತ್ಯ ಸೂರ್ಯ ನಮಸ್ಕಾರ ಮಾಡುವಂತೆ ಹೇಳಿತ್ತು. ಇದೀಗ ಭೋಜನ ಮಂತ್ರವನ್ನು ಕಡ್ಡಾಯಗೊಳಿಸುವ ಮೂಲಕ ಇನ್ನೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ