ಕೊಚ್ಚಿ: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಟಿಸುತ್ತಿರುವ 'ರಾವಣ' ಸಿನಿಮಾಕ್ಕಾಗಿ ಆನೆಗಳನ್ನು ಬಳಸಲು ಅನುಮತಿ ಪಡೆದಿರದ ಹಿನ್ನಲೆಯಲ್ಲಿ ನಿರ್ದೇಶಕ ಮಣಿರತ್ನಂರವರ ನಿರ್ಮಾಣ ಸಂಸ್ಥೆ ಮದ್ರಾಸ್ ಟಾಕಿಸ್‌ಗೆ ಪ್ರಾಣಿ ದಯಾ ಸಂಸ್ಥೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ. ಗುರುವಾರ ಶೂಟಿಂಗ್ ಸಂದರ್ಭದಲ್ಲಿ ಮಾವುತನನ್ನು ಆನೆಯೊಂದು ಕೊಂದು ಹಾಕಿದ ನಂತರ ಈ ಬೆಳವಣಿಗೆ ನಡೆದಿದೆ.