ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸ್ವಯಂವರ್'ನಲ್ಲಿ ನಾನು ಮದುವೆಯಾಗಲ್ಲ: ರಾಖಿ ಸಾವಂತ್
(Rakhi Sawant | Rakhi ka Swayamvar | NDTV imagine | Gaurav Tiwari)
ಆಗಸ್ಟ್ 2ರ ಭಾನುವಾರದ ಆವೃತ್ತಿಯಲ್ಲಿ ರಾಖಿ ಸಾವಂತ್ ಮದುವೆ ನಡೆದೇ ಹೋಗುತ್ತದೆ ಎಂದು ಕಾಯುತ್ತಿದ್ದವರಿಗೆ ನಿರಾಸೆ ಕಾದಿದೆ. ಅಂದಿನ 'ರಾಖಿ ಕಾ ಸ್ವಯಂವರ್' ರಿಯಾಲಿಟಿ ಶೋದಲ್ಲಿ ಆಕೆ ಮದುವೆಯಾಗುವುದಿಲ್ಲವಂತೆ. ಕೇವಲ ಎಂಗೇಜ್‌ಮೆಂಟ್ ಮಾತ್ರ ಎಂದು ಹೇಳಿಕೊಂಡಿದ್ದಾಳೆ.
ವಾಸ್ತವಿಕ ಜೀವನದ ಪ್ರಮುಖ ಘಟ್ಟವಾದ ಮದುವೆಯನ್ನು ಟೀವಿ ರಿಯಾಲಿಟಿ ಶೋವರೆಗೂ ತಂದ ಬಗ್ಗೆ ಪತ್ರಕರ್ತರು ಪ್ರಶ್ನೆಗಳನ್ನೆತ್ತಿದಾಗ ಆಕೆ 'ತಾನು ಈಗಲೇ ಮದುವೆಯಾಗುತ್ತಿಲ್ಲ' ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾಳೆ.
IFM
ನಾನು ಇತಿಹಾಸ ಸೃಷ್ಟಿಸಲು ಯತ್ನಿಸಿದ್ದೇನೆ. ಸ್ವಯಂವರ ಕಲ್ಪನೆಯೇನೂ ಹೊಸತಲ್ಲ. ರಾಮಾಯಣ ಕಾಲದಲ್ಲಿ ಸೀತೆಯನ್ನು ರಾಮ ವರಿಸಿದ್ದು ಸ್ವಯಂವರದಲ್ಲಲ್ಲವೇ? ನನ್ನ ಪ್ರಕಾರ ನಾನೇನೂ ತಪ್ಪು ಮಾಡಿಲ್ಲ ಎಂದರು.
ಅಷ್ಟಕ್ಕೂ ನಾನು ಆಗಸ್ಟ್ 2ರಂದು ಮದುವೆಯಾಗುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ. ಅಂದು ಯಾರಾದರೊಬ್ಬರನ್ನು ನನ್ನ ಜೀವನ ಸಂಗಾತಿಯಾಗಿ ಆರಿಸುತ್ತೇನೆ. ಇದು ನಿಶ್ಚಿತಾರ್ಥ ಎಂಬುದಕ್ಕಿಂತ ಸ್ವಲ್ಪ ಮೇಲ್ಮಟ್ಟದ್ದು. ಆದರೆ ಆಗಲೇ ಮದುವೆಯಾಗಿ ಬಿಡಲ್ಲ. ಮನರಂಜನೆಗಾಗಿ ನನ್ನ ಜೀವನದಲ್ಲಿ ಆಟವಾಡಲು ನಾನು ಹೋಗಲ್ಲ ಎಂದು ಪ್ಲೇಟ್ ಬದಲಾಯಿಸಿದ್ದಾಳೆ.
ಎನ್‌ಡಿಟೀವಿ ಇಮ್ಯಾಜಿನ್‌ನಲ್ಲಿ ಪ್ರಸಾರವಾಗುತ್ತಿರುವ 'ರಾಖಿ ಕಾ ಸ್ವಯಂವರ್' ಕಾರ್ಯಕ್ರಮದಲ್ಲಿ ರಾಖಿ ಮದುವೆಯಾಗೋಲ್ಲ ಎಂದು ಈ ಹಿಂದೆಯೇ ಹರಡಿದ್ದ ಗಾಳಿಸುದ್ದಿಗಳು ಈ ಮೂಲಕ ನಿಜವಾಗುತ್ತಿವೆ.
ಅಂದು ನಾನು ಸಿಂಧೂರ ಅಥವಾ ಮಂಗಲಸೂತ್ರ ಧರಿಸಲಾರೆ. ನಾನು ಆರಿಸುವ ವ್ಯಕ್ತಿಯನ್ನು ಸಂಪೂರ್ಣ ತಿಳಿದುಕೊಂಡು, ಆತ ನನಗೆ ಹೊಂದಿಕೊಳ್ಳುತ್ತಾನೆ ಎಂಬುದನ್ನು ಖಾತರಿಪಡಿಸಿಕೊಂಡ ಮೇಲೆ ಮದುವೆಯಾಗುತ್ತೇನೆ ಎಂದು ರಾಖಿ ತಿಳಿಸಿದ್ದಾಳೆ.
ಆಗಸ್ಟ್ ಎರಡರ ಸಂಚಿಕೆಯಲ್ಲಿ ಗುಜರಾತ್ ಎನ್‌ಆರ್‌ಐ ಇಲೇಶ್ ಪರುಜನ್‌ವಾಲಾ ಜತೆ ರಾಖಿ ನಿಶ್ಚಿತಾರ್ಥ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಸ್ವಯಂವರ ಕಲ್ಪನೆಯನ್ನು ನಕಲಿ ಮಾಡಿದ ಆರೋಪದ ಮೇಲೆ ಎನ್‌ಡಿಟೀವಿ ಇಮ್ಯಾಜಿನ್ ಇಮ್ಯಾಜಿನ್ ಅಧಿಕಾರಿಗಳು, ರಾಖಿ ಸಾವಂತ್ ಹಾಗೂ ಇಬ್ಬರು ಸ್ಪರ್ಧಿಗಳ ಮೇಲೆ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯವು ಎರಡು ದಿನಗಳ ಹಿಂದೆ ಆದೇಶಿಸಿದ್ದನ್ನು ಈಗ ಸ್ಮರಿಸಬಹುದಾಗಿದೆ.