ಬೆಂಗ್ಳೂರು ಹಾಗೂ ಚೆನ್ನೈಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಆಂಧ್ರಪ್ರದೇಶಕ್ಕೆ ಸೇರಿದ್ದು ಎಂಬುದಾಗಿ ಆಂಧ್ರ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ಶುಕ್ರವಾರ ಹಕ್ಕು ಸ್ಥಾಪಿಸಿದ್ದಾರೆ. ರಾಜ್ಯದ ಗಡಿಪ್ರದೇಶಕ್ಕೆ ಇವುಗಳ ಸಾಮೀಪ್ಯದ ಹಿನ್ನೆಲೆಯಲ್ಲಿ ಇವು ಆಂಧ್ರಕ್ಕೆ ಸೇರಿದ್ದು ಎಂಬುದು ಅವರ ಹೊಸವಾದ.
ಸಿಕೊರ್ಸ್ಕಿ ಹೆಲಿಕಾಫ್ಟರ್ ಕ್ಯಾಬಿನ್ ಉತ್ಪಾದನಾ ಯೋಜನೆಯ ಅನಾವರಣದ ವೇಳೆ ತನ್ನ ಸರ್ಕಾರವು ಉಪಕ್ರಮಗೊಳಿಸಿರುವ ಮೂಲಸೌಕರ್ಯ ಅಭಿವೃದ್ಧಿಗಳನ್ನು ಪಟ್ಟಿ ಮಾಡುತ್ತಿದ್ದ ಅವರು, ಚೆನ್ನೈ ಹಾಗೂ ಬೆಂಗ್ಳೂರು ವಿಮಾನ ನಿಲ್ದಾಣಗಳು ರಾಜ್ಯದ ಗಡಿಗಳಾದ ಚಿತ್ತೂರು ಮತ್ತು ಅನಂತಪುರ ಜಿಲ್ಲೆಯಿಂದ ಕೇವಲ 45 ನಿಮಿಷಗಳ ದೂರದಲ್ಲಿವೆ ಎಂದು ನುಡಿದರು.
ನಮ್ಮ ವಿಶೇಷ ಆರ್ಥಿಕ ವಲಯ ಶ್ರೀ ಸಿಟಿಯು ಚೆನ್ನೈ ಸಮೀಪ ಹಾಗೂ ಬೆಂಗ್ಳೂರು ಸಮೀಪದ ಲೇಪಾಕ್ಷಿ ಸಮೀಪ ಇವೆ ಎಂದು ಅವರು ನುಡಿದರು.
ಈ ಹಿನ್ನೆಲೆಯಲ್ಲಿ ಶಂಶಾಬಾದಿನ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಆಂಧ್ರ ಮೂರು ವಿಮಾನ ನಿಲ್ದಾಣಗಳನ್ನು ಹೊಂದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.