ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುದ್ಧ ನೌಕೆಗೆ ಅರಿಹಂತ್ ಹೆಸರು: ಜೈನರ ನೋಟೀಸ್ (Jain community | Arihant | Centre | The notice)
 
ಭಾರತದ ಪ್ರಪ್ರಥಮ ದೇಶೀಯ ಯುದ್ಧ ನೌಕೆ ಅಣುಶಕ್ತಿ ಚಾಲಿತ ಅರಿಹಂತ್‌ ಅನ್ನು ದೇಶಕ್ಕೆ ಸಮರ್ಪಿಸಿ ಐದು ದಿನಗಳ ಬಳಿಕ, ಜೈನ ಸಮುದಾಯವು ನೌಕೆಗೆ ಇಡಲಾಗಿರುವ ಹೆಸರಿನ ಕುರಿತು ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸರ್ಕಾರಕ್ಕೆ ನೋಟೀಸು ನೀಡಿದೆ. ಮುಂಬೈ ಮೂಲದ ಅಶೋಕ್ ಭಿಕಂಚಂದ್ ಜೈನ್ ಎಂಬವರು ಜುಲೈ 27ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನೋಟೀಸು ನೀಡಿದ್ದಾರೆ.

"ಅರಿಹಂತ್ ಎಂಬ ಶಬ್ದವು ಜೈನಧರ್ಮದ ಎಲ್ಲಾ ನಂಬುಗೆಗಳನ್ನು ಪ್ರತಿಬಿಂಬಿಸುತ್ತದೆ. ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಕ್ರೋಧ, ಲಂಪಟತನ, ದುರಾಸೆ ಮತ್ತು ಹಿಂಸಾಚಾರವನ್ನು ಗೆಲ್ಲುವುದನ್ನು ಸೂಚಿಸುತ್ತದೆ. ಅಹಿಂಸೆಯು ನಮ್ಮ ಧರ್ಮದ ಮೂಲತತ್ವವಾಗಿದೆ. ಆದರೆ ಈ ಯುದ್ಧನೌಕೆಯು ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ" ಎಂದು ಮಹೇಂದ್ರ ಜೈನ್ ಎಂಬ ವಕೀಲರು ಕಳುಹಿಸಿರುವ ನೋಟೀಸಿನಲ್ಲಿ ಅಶೋರ್ ಜೈನ್ ಹೇಳಿದ್ದಾರೆ.

"ಈ ಹೆಸರನ್ನು ಜಲಾಂತರ್ಗಾಮಿ ಯುದ್ಧ ನೌಕೆಗೆ ಇರಿಸಿರುವುದಕ್ಕೆ ನನ್ನ ಕಕ್ಷಿಗಾರರು ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಜೈನಧರ್ಮಕೋಸ್ಕರ ನೌಕೆಗೆ ಆ ಹೆಸರಿರಿಸಿರುವ ಕ್ರಮವನ್ನು ಪುನರ್ ಪರಿಶೀಲಿಸಲು ವಿನಂತಿಸಿದ್ದಾರೆ" ಎಂದು ವಕೀಲ ಮಹೇಂದ್ರ ಜೈನ್ ಹೇಳಿದ್ದಾರೆ.

ಐವರು ಹಿರಿಯ ಜೈನಭಿಕ್ಷುಗಳು ಸಹಿಹಾಕಿದ ಕರಪತ್ರಗಳನ್ನು ಪ್ರತಿ ಜೈನ ದೇವಾಲಯದಲ್ಲಿ ಭಿತ್ತರಿಸಲು ನಿರ್ಧರಿಸಲಾಗಿದೆ. ಈ ಕರಪತ್ರದಲ್ಲಿ ಆರಿಹಂತ್ ಹೆಸರನ್ನು ಬದಲಿಸುವಂತೆ ಪ್ರಧಾನಿ ಹಾಗೂ ರಕ್ಷಣಾ ಸಚಿವರಿಗೆ ಪತ್ರಬರೆಯಲು ವಿನಂತಿಸಲಾಗಿದೆ.

"ನಾವು ಈ ಕುರಿತು ಕೇಂದ್ರಕ್ಕೆ ಮನವಿಗಳನ್ನು ಕಳುಹಿಸಿದ್ದೇವೆ. ಈ ವಿವಾದವನ್ನು ಶಾಂತಿಯುತವಾಗಿ ಪರಿಹರಿಸದಿದ್ದರೆ ಈ ಕುರಿತು ಕೋರ್ಟಿಗೆ ತೆರಳವ ಸಮುದಾಯದ ಸದಸ್ಯರನ್ನು ನಾವು ಬೆಂಬಲಿಸಲಿದ್ದೇವೆ" ಎಂದು ಮುಂಬೈ ಮೂಲದ ಆದೇಶ್ವರ ಜೈನ ದೇವಾಲದ ಅತ್ಯಂತ ಹಿರಿಯ ಭಿಕ್ಷು ಸೂರ್ಯೋದಯಸಾಗರ್ ಸುರಿಸ್ವರಾಜ್ ಮಹಾರಾಜ್ ಹೇಳಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ