ತನ್ನ ಪುತ್ರ ಸರಬ್ಜೋತ್ ಸಿಂಗ್ ಅಲಿಯಾಸ್ ಸ್ವೀಟಿ ಸಿಂಗ್ ಮೇಲಿನ ಭ್ರಷ್ಟಾಚಾರ ಆರೋಪವು ತನ್ನ ವಿರುದ್ಧದ ಸಂಚು ಎಂಬುದಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದ ಮುಖ್ಯಸ್ಥ ಬೂಟಾ ಸಿಂಗ್ ಹೇಳಿದ್ದಾರೆ.
ತನ್ನ ಪುತ್ರ ಈ ಪ್ರಕರಣದಲ್ಲಿ ನಿರಪರಾಧಿ ಎಂದಿರುವ ಅವರು, ದೂರು ನೀಡಿರುವ ರಾಮ್‌ರಾಜ್ ಪಾಟೀಲ್‌ಗೆ ಮಹಾರಾಷ್ಟ್ರದ ಅತಿದೊಡ್ಡ ಬಿಲ್ಡರ್ ಮಾಫಿಯಾ ಹೊಂದಿರುವುದಾಗಿ ಆರೋಪಿಸಿರುವ ಬೂಟಾ ಸಿಂಗ್, ರಾಜಕೀಯ ಪಕ್ಷವೊಂದರ ಸೂಚನೆಯ ಮೇರೆಗೆ ತನ್ನ ಪುತ್ರನ ಮೇಲೆ ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ.
ಇದು ನನ್ನ ರಾಜಕೀಯ ಹಾಗೂ ವೈಯಕ್ತಿಕ ಜೀವನವನ್ನು ಮುಗಿಸಲು ಹೂಡಿರುವ ಸಂಚು ಎಂದಿದ್ದಾರಲ್ಲದೆ, ಈ ಎಲ್ಲಾ ಪ್ರಕರಣದ ಹಿಂದೆ ಮಹಾರಾಷ್ಟ್ರ ಮೂಲದ ರಾಜಕೀಯ ಪಕ್ಷದ ಹುನ್ನಾರವಿದೆ ಎಂದು ದೂರಿದ್ದಾರೆ. ಆದರೆ ಅದು ಯಾವ ಪಕ್ಷ ಎಂದು ಅವರು ಹೆಸರಿಸಲಿಲ್ಲ. ಆದರೆ ಈ ಕುರಿತು ಸಿಬಿಐ ಪಾತ್ರದ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.