ಇಂಡೋ-ಪಾಕಿಸ್ತಾನ ಜಂಟಿ ಹೇಳಿಕೆಗೆ ಭಾರೀ ವಿರೋಧ ಎದುರಿಸಿರುವ ಸರ್ಕಾರವು, "ಪಾಕಿಸ್ತಾನದೊಂದಿಗೆ ಹಿಂಸಾಚಾರದ ಅಥವಾ ಹಿಂಸೆಯನ್ನು ಬಳಸುವ ಭೀತಿಯ ವಾತಾವರಣದಲ್ಲಿ ಮಾತುಕತೆ ಇಲ್ಲ" ಎಂದು ಶುಕ್ರವಾರ ಹೇಳಿದೆ. ಇಸ್ಲಾಮಾಬಾದ್‌ನಿಂದ ಭಯೋತ್ಪಾದನೆಯ ನಿರಂತರ ಭೀತಿಯನ್ನು ಭಾರತ 'ಉಪೇಕ್ಷಿಸುವಂತಿಲ್ಲ ಮತ್ತು ಉಪೇಕ್ಷಿಸುವುದಿಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಅವರು ತಮ್ಮ ಸಚಿವಾಲಯದ ಕಾರ್ಯಸ್ವರೂಪದ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸುತ್ತಾ ಹೇಳಿದ್ದಾರೆ.
"ಈ ನಮ್ಮ ದೃಷ್ಟಿಕೋನ ಮತ್ತು ಭಾರತದ ವಿರುದ್ಧ ಉಗ್ರವಾದಿ ಕೃತ್ಯಗಳನ್ನು ನಡೆಸಲು ತಮ್ಮ ನೆಲವನ್ನು ಬಳಸಲು ಬಿಡುವುದಿಲ್ಲ ಎಂಬ ತಮ್ಮ ಬದ್ಧತೆಯನ್ನು ಪಾಕಿಸ್ತಾನ ಪರಿಪೂರ್ಣಗೊಳಿಸುವ ತನಕ ಅರ್ಥಪೂರ್ಣ ಮಾತುಕತೆ ಸಾಧ್ಯವಿಲ್ಲ ಎಂಬುದು ಜುಲೈ 19ರ ಜಂಟಿ ಹೇಳಿಕೆಯಲ್ಲಿ ಒಳಗೊಂಡಿದೆ" ಎಂಬುದಾಗಿ ಅವರು ನುಡಿದರು.
ಸರ್ಕಾರವು ಶರಮೇಲ್ ಶೇಕ್‌ನಲ್ಲಿ 'ಚಿಸ್ಥಾಯಿಯಾಗಿರುವ ತಪ್ಪು' ನಡೆಸಿದೆ ಮತ್ತು ವಾಜಪೇಯಿ ಅವರನ್ನು ಹೊಗಳುವುದರಿಂದ ಈ ಕಳಂಕದಿಂದ ಮರೆಸಿಕೊಳ್ಳುವಂತಿಲ್ಲ ಎಂದು ವಿಪಕ್ಷ ನಾಯಕ ಅರುಣ್ ಜೇಟ್ಲಿ ಅವರು ದೂರಿದವೇಳೆಗೆ ಕೃಷ್ಣ ಮೇಲಿನ ಉತ್ತರ ನುಡಿದರು.