ಇಂಡೋ-ಪಾಕ್ ಜಂಟಿ ಹೇಳಿಕೆಯು ರಾಷ್ಟ್ರದ ಮೂಲಭೂತ ವಿದೇಶಾಂಗ ನೀತಿಯನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದಿರುವ ಸರ್ಕಾರವು ಇದರಲ್ಲಿ ಬಲೂಚಿಸ್ಥಾನವನ್ನು ಪ್ರಸ್ತಾಪಿಸಿರುವುದರಿಂದ ಅಂತರ ಕಾಯ್ದುಕೊಂಡಿದ್ದು, ಈ ಪ್ರಸ್ತಾಪವು ಪಾಕಿಸ್ತಾನದ ಏಕಪಕ್ಷೀಯ ಕಲ್ಪನೆ ಎಂದು ಹೇಳಿದೆ.
ಜಂಟಿ ಹೇಳಿಕೆ ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಮಧ್ಯಪ್ರವೇಶ ಮಾಡಿದ ವಿತ್ತಸಚಿವ ಪ್ರಣಬ್ ಮುಖರ್ಜಿ ಅವರು ಸಮಗ್ರ ಮಾತುಕತೆಯಿಂದ ಉಗ್ರವಾದವನ್ನು ಹೊರಗಿರಿಸುವ ಮೂಲಕ ಉಗ್ರವಾದದ ವಿರುದ್ಧ ಪಾಕಿಸ್ತಾನ ಕ್ರಮಕೈಗೊಳ್ಳುವ ಕುರಿತು ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದರು.
"ಇದು ಏಕಪಕ್ಷೀಯ ಹೇಳಿಕೆಯಾಗಿದೆ. ಮತ್ತು ಅದು ಅದನ್ನು ಏಕಪಕ್ಷೀಯ ಹೇಳಿಕೆಯಾಗಿರುವಾಗ ನಾವು ಅದರಲ್ಲಿ ಪಕ್ಷವಲ್ಲ. ಇದು ಪಾಕಿಸ್ತಾನದ ಕಲ್ಪನೆಯಾಗಿದ್ದು, ಇದನ್ನು ನಮ್ಮೊಂದಿಗೆ ಹಂಚಿಕೊಂಡಿಲ್ಲ" ಎಂದು ಅವರು ಬಿಜೆಪಿ ಹಾಗೂ ಇತರ ವಿರೋಧ ಪಕ್ಷಗಳು ಮಾಡಿರುವ ಬಲವಾದ ದಾಳಿಯ ವೇಳೆಗೆ ಸರ್ಕಾರದ ಪರವಾಗಿ ಮಾತನಾಡುತ್ತಾ ನುಡಿದರು. ಬಲೂಚಿಸ್ಥಾನವನ್ನು ಜಂಟಿ ಹೇಳಿಕೆಯಲ್ಲಿ ಸೇರಿಸಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಪಕ್ಷಗಳು ಇದನ್ನು ಸೇರಿಸಲು ಸರ್ಕಾರ ಯಾಕೆ ಒಪ್ಪಿದೆ ಎಂದು ಉತ್ತರ ಬಯಸಿದ್ದವು.