ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಎಲ್ಲಾ ಆರೋಪಿಗಳ ಮೇಲೆ ಹೇರಲಾಗಿದ್ದ ಮೋಕಾ ಆರೋಪಗಳನ್ನು ಮುಂಬೈ ಸತ್ರ ನ್ಯಾಯಾಲಯ ಕೈಬಿಟ್ಟಿದೆ. ಹಾಗೂ ಈ ಕುರಿತು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಬಲಪಂಥೀಯ ಪಂಗಡದ ಮೇಲೆ ಸ್ಫೋಟದ ಆರೋಪವನ್ನು ಮೇಲ್ನೋಟಕ್ಕೆ ಹೊರಿಸಲಾಗಿದೆ.
ಸಾಧ್ವಿ ಪ್ರಜ್ಞಾ ಸಿಂಗ್, ಕರ್ನಲ್ ಶ್ರೀಕಾಂತ್ ಪುರೋಹಿತ್, ಸ್ವಘೋಷಿತ ಶಂಕರಾಚಾರ್ಯ ದಯಾನಂದ ಪಾಂಡೆ ಸೇರಿದಂತೆ 11 ಮಂದಿಯ ವಿರುದ್ಧ ಪ್ರಕರಣದ ಆರೋಪ ಹೊರಿಸಲಾಗಿದೆ.
ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆಯ ಹಿನ್ನೆಲೆಯಲ್ಲಿ ಇನ್ನೊರ್ವ ಆಪಾದಿತ ರಾಕೇಶ್ ದಾಬಾಡೆ ಎಂಬವರನ್ನು ಇತ್ತೀಚೆಗೆ ನ್ಯಾಯಾಲಯವೊಂದು ಬಿಡುಗಡೆ ಮಾಡಿದೆ. ದಾಬಡೆ ಎಲ್ಲಾ ಆರೋಪಿತರ ಪ್ರಮುಖ ಸಂಪರ್ಕಕೊಂಡಿ ಎಂದು ಹೇಳಲಾಗಿತ್ತು.
ದಿವಂಗತ ಹೇಮಂತ ಕರ್ಕರೆ ಅವರು ಉಗ್ರದಾಳಿಗೀಡಾಗಿ ಸಾವನ್ನಪ್ಪಿರುವ ಕಾಲದಲ್ಲಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದರು.
ಅದಾಗ್ಯೂ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಪ್ರತಿನಿಧಿಸುತ್ತಿರುವ ವಕೀಲರನ್ನು ಕೊಲೆ ಮಾಡಲು ಸಂಚು ಹೂಡಿದ್ದ ಛೋಟಾ ಶಕೀಲನ ಗುಂಪಿನವರೆನ್ನಲಾದ ನಾಲ್ವರನ್ನು ಕ್ರೈಂ ಬ್ರಾಂಚ್ ಇತ್ತೀಚೆಗೆ ಬಂಧನಕ್ಕೀಡುಮಾಡಿತ್ತು.