ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಚ್ ಕಾ ನೋಡಲಾಗದಿದ್ದರೆ ಟಿವಿ ಬಂದ್ ಮಾಡಿ: ಕೋರ್ಟ್ (Sach Ka Saamna | Court | Star Plus | TV)
 
ಸ್ಟಾರ್ ಪ್ಲಸ್ ಟಿವಿಯಲ್ಲಿ ಪ್ರಸಾರವಾಗುವ ಸಚ್ ಕಾ ಸಾಮ್ನಾ ಕಾರ್ಯಕ್ರಮವನ್ನು ನೋಡಲಾಗದಿದ್ದರೆ ಟಿವಿ ಬಂದ್ ಮಾಡಿ ಎಂಬುದಾಗಿ ದೆಹಲಿ ಹೈಕೋರ್ಟ್ ವೀಕ್ಷಕರಿಗೆ ಸಲಹೆ ಮಾಡಿದೆ.

ಈ 'ಮನೆಮುರುಕ' ಕಾರ್ಯಕ್ರಮದ ಪ್ರಸಾರದ ಮೇಲೆ ನಿಯಂತ್ರಣ ಹೇರಬೇಕು ಎಂಬ ಮನವಿಗಳನ್ನು ವಜಾಗೊಳಿಸುತ್ತಾ ನ್ಯಾಯಾಲಯ ಈ ಸಲಹೆ ಮಾಡಿದೆ.

ನೈತಿಕತೆಯನ್ನು ಕಾಪಾಡುವುದು ತನ್ನ ಪಾತ್ರವಲ್ಲ ಎಂದು ಹೇಳಿದ ನ್ಯಾಯಾಲಯ, ಈ ಕಾರ್ಯಕ್ರಮದಿಂದ ನೋವನುಭವಿಸುವವರು ಅದರ ಪ್ರಸಾರದ ವೇಳೆಗೆ ಟಿವಿ ಬಂದ್ ಮಾಡಿ ಎಂದು ಹೇಳಿದೆ.

ಈ ಕಾರ್ಯಕ್ರಮದ ಪ್ರಸಾರವನ್ನು ರದ್ದುಗೊಳಿಸಬೇಕು ಎಂಬುದಾಗಿ ಬಿಜೆಪಿ ಹಾಗೂ ಎಸ್ಪಿ ಸಂಸದರು ಸರ್ಕಾರವನ್ನು ಒತ್ತಾಯಿಸಿದ ವೇಳೆ ಇದು ತೊಂದರೆಯಲ್ಲಿ ಸಿಲುಕಿತ್ತು. ಈ ಕಾರ್ಯಕ್ರಮವು ಕೊಳಕು ಮೌಲ್ಯಗಳನ್ನು ಬಿತ್ತರಿಸುತ್ತಿದ್ದು, ಇದು ಭಾರತೀಯ ಮೌಲ್ಯಗಳು ಮತ್ತು ನೈತಿಕತೆಗೆ ಬೆದರಿಕೆಯೊಡ್ಡುತ್ತಿದೆ ಎಂದು ದೂರಿದ್ದರು.

ನ್ಯಾಯಮೂರ್ತಿಗಳಾದ ಎ.ಪಿ. ಶಾ ಮತ್ತು ಮನಮೋಹನ್ ಅವರುಗಳನ್ನು ಒಳಗೊಂಡಿದ್ದ ವಿಭಾಗೀಯ ಪೀಠವು ರಾಷ್ಟ್ರದ ಸಂಸ್ಕೃತಿಯು ಟಿವಿ ಕಾರ್ಯಕ್ರಮದಿಂದ ಒಡೆಯುವಷ್ಟು ದುರ್ಬಲವಲ್ಲ ಎಂದು ಹೇಳಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ