ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನಿರುಪಮಾ ರಾವ್ (Nirupama Rao | Foreign Secretary | Chokila Iyer Shivshankar Menon)
 
ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನಿರುಪಮಾ ರಾವ್ ಅವರು ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ವಿದೇಶಾಂಗ ಸೇವೆಯ ನೇತೃತ್ವ ವಹಿಸುತ್ತಿರುವ ದ್ವಿತೀಯ ಮಹಿಳೆ ಇವರಾಗಿದ್ದಾರೆ. 2001ರಲ್ಲಿ ಕೋಕಿಲಾ ಅಯ್ಯರ್ ಅವರು ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಪ್ರಥಮ ಮಹಿಳೆಯಾಗಿದ್ದಾರೆ.

ದಕ್ಷಿಣ ಬ್ಲಾಕ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರುಪಮಾ ಅವರು ಶಿವಶಂಕರ್ ಮೆನನ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ಐಎಫ್ಎಸ್ ಸೇವೆಯ 1973ರ ಬ್ಯಾಚಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ನಿರುಪಮಾ ಅವರು 2001ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಥಮ ಮಹಿಳಾ ವಕ್ತಾರರಾಗಿ ನಿಯುಕ್ತಿಗೊಂಡಿದ್ದರು. ಇದಾಗ ಬಳಿಕ ಅವರು ಶ್ರೀಲಂಕಾಗೆ ಭಾರತೀಯ ರಾಯಭಾರಿಯಾಗಿದ್ದರು. ಬಳಿಕ ಚೀನದ ರಾಯಭಾರಿಯಾಗಿದ್ದರು.

ತನ್ನ 36 ವರ್ಷದ ಸೇವಾವಧಿಯಲ್ಲಿ ಅವರು ಪೆರು ದೇಶಕ್ಕೂ ಪ್ರತಿನಿಧಿಯಾಗಿದ್ದರು. ಇದಲ್ಲದೆ, ಮಾಸ್ಕೋ ಮಿಶನ್‌ನ ಉಪ ಮುಖ್ಯಸ್ಥೆಯಾಗಿದ್ದರು.

ನಿರುಪಮಾ ಅವರು 2010ರಲ್ಲಿ ತಮ್ಮ ವಿದೇಶಾಂಗ ಸೇವೆಯಿಂದ ನಿವೃತ್ತರಾಗಲಿದ್ದು ಆ ವೇಳೆ ಅವರ ವಿದೇಶಾಂಗ ಕಾರ್ಯದರ್ಶಿ ಅಧಿಕಾರಾವಧಿ ಕೊನೆಗೊಳ್ಳಲಿದೆ.

• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ