ಕೃಷ್ಣಾಗರ್(ಪ.ಬಂಗಾಳ), ಶನಿವಾರ, 1 ಆಗಸ್ಟ್ 2009( 13:06 IST )
ಶಿಕ್ಷಕನೊಬ್ಬ ತರಗತಿಯಲ್ಲೇ ತನ್ನ ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ತಂದೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದುರ್ಘಟನೆಯು ನಾದಿಯಾ ಜಿಲ್ಲೆಯ ನೊನಾಜಂಗ್ ಎಂಬಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಭವಿಸಿದೆ.
ತನ್ನ ಪುತ್ರಿಯು ಎರಡನೆ ತರಗತಿಯಲ್ಲಿ ಕಲಿಯುತ್ತಿದ್ದಳೆಂದು ದೂರಿನಲ್ಲಿ ಹೇಳಲಾಗಿದೆ. ಈ ಕುರಿತು ಶಿಕ್ಷಕ ಬೇರೆಯೇ ಕಥೆ ಹೇಳುತ್ತಿದ್ದಾನೆ. ತಾನು ಆ ಹುಡುಗಿಯನ್ನು ತೊಡೆಯ ಮೇಲೆ ಕುಳ್ಳಿರಿಸಿ ಪಾಠಕಲಿಸಲು ಯತ್ನಿಸುತ್ತಿದ್ದೆ. ಆಕೆಯ ಮೇಲೆ ತನಗೆ ಅಕ್ಕರೆ ಇತ್ತಷ್ಟೆ ಅಲ್ಲದೆ ಮತ್ತೇನಿಲ್ಲ ಎಂದು ಹೇಳಿದ್ದಾನೆ.
ಆರೋಪಿ ಶಿಕ್ಷಕ ತರೆಮರೆಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಆದರೆ ಸ್ಥಳೀಯರು ಹೇಳುವಂತೆ ಈ ಶಿಕ್ಷಕನನ್ನು ಫಿತೂರಿಯೊಂದರ ಬಲಿಪಶುವಾಗಿಸಲಾಗಿದೆ. ಈತ ಸಿಪಿಐ(ಎಂ) ಅಂಗವಾಗಿರುವ ಅಖಿಲ ಬೆಂಗಾಲಿ ಪ್ರಾಥಮಿಕ ಶಿಕ್ಷಕರ ಸಂಘ ತೊರೆದು ತೃಣಮೂಲ ಕಾಂಗ್ರೆಸ್ ಬೆಂಬಲಿತ ಶಿಕ್ಷಕರ ಸಂಘಟನೆ ಸೇರಿದ್ದ. ಇದಕ್ಕಾಗಿ ಈತನ ವಿರುದ್ಧ ಸಂಚು ಹೂಡಲಾಗಿದೆ ಎಂಬುದು ಅವರ ಅಭಿಪ್ರಾಯ.