ಮಹಿಳೆಯರಿಂದ ಪುರುಷರಿಗೆ ಹಾಗೂ ಪುರುಷರಿಂದ ಮಹಿಳೆಯರಿಗೆ ಮಸಾಜ್ ಸೇವೆ ಒದಗಿಸುವ ಪಾರ್ಲರ್‌ಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಇದಕ್ಕೆ ಕಾನೂನು ಸಮ್ಮತ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ಮಸಾಜ್ ಕೇಂದ್ರಗಳಲ್ಲಿ ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತಿದ್ದರೆ ಮಾತ್ರ ಅವುಗಳ ಮೇಲೆ ಪೊಲೀಸರು ದಾಳಿ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬಹುದು.
ಇದರ ಹೊರತಾಗಿ ಮಹಿಳೆಯೊಬ್ಬಳು ಪುರುಷನಿಗೆ ಮಸಾಜ್ ಮಾಡುತ್ತಿದ್ದಾಳೆಂಬ ಕಾರಣಕ್ಕೆ ದಾಳಿ ನಡೆಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಪುರುಷರನ್ನು ಸೆಳೆಯಲು ಮಸಾಜ್ ಪಾರ್ಲರ್‌ಗಳು ಯುವತಿಯರನ್ನು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿ ಪೊಲೀಸರು ಪಾರ್ಲರ್‌ಗಳ ಮೇಲೆ ದಾಳಿ ನಡೆಸಿದ್ದರು. ಇದನ್ನು ಪ್ರಶ್ನಿಸಿ ಕೆಲ ಪಾರ್ಲರ್ ಮಾಲಿಕರು ಹೈಕೋರ್ಟ್ ಮೆಟ್ಟಿಲೇರಿದ್ದರು.