ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಧ್ವಿ ವಿರುದ್ಧ ಮೋಕಾ ವಾಪಸ್ ಪ್ರಶ್ನಿಸಿ ಸುಪ್ರೀಂಗೆ; ಚವಾಣ್ (Malegaon case | Supreme Court | MCOCA | Sadhvi Pragya Singh,)
ಸಾಧ್ವಿ ವಿರುದ್ಧ ಮೋಕಾ ವಾಪಸ್ ಪ್ರಶ್ನಿಸಿ ಸುಪ್ರೀಂಗೆ; ಚವಾಣ್
ಪುಣೆ, ಭಾನುವಾರ, 2 ಆಗಸ್ಟ್ 2009( 15:22 IST )
PTI
ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ವಿರುದ್ಧ ದಾಖಲಿಸಿದ್ದ ಮೋಕಾ ಕಾಯ್ದೆಯನ್ನು ಕೈಬಿಟ್ಟಿರುವ ಮುಂಬೈ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸರ್ಕಾರ ನಿರ್ಧರಿಸಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ತಿಳಿಸಿದ್ದಾರೆ.
ಒಂದು ಜಾತಿ ಮತ್ತು ಧರ್ಮದ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿರುವ ಆರೋಪಿಗಳ ವಿರುದ್ಧ ಕಾನೂನು ಬದ್ಧವಾಗಿಯೇ ಮೋಕಾ ಪ್ರಕರಣ ದಾಖಲಿಸಲಾಗಿತ್ತು ಎಂದು ಶನಿವಾರ ರಾತ್ರಿ ನಡೆದ ಪಕ್ಷದ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದರು.
ಆ ಕಾರಣದಿಂದಾಗಿಯೇ ಸಾಧ್ವಿ ಸೇರಿದಂತೆ 11ಮಂದಿ ವಿರುದ್ಧ ದಾಖಲಾಗಿದ್ದ ಮೋಕಾ ಕಾಯ್ದೆಯನ್ನು ಹಿಂಪಡೆದಿರುವ ವಿಶೇಷ ನ್ಯಾಯಾಲಯದ ಕ್ರಮವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ರಾಜ್ಯ ಸರ್ಕಾರ ಸಿದ್ದವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
2008ರಲ್ಲಿ ಮಾಲೆಗಾಂವ್‌ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್, ಕರ್ನಲ್ ಪುರೋಹಿತ್, ಸ್ವಯಂಘೋಷಿತ ಶಂಕರಾಚಾರ್ಯ ದಯಾನಂದ ಪಾಂಡೆ ಸೇರಿದಂತೆ 11 ಮಂದಿ ವಿರುದ್ಧ ಮೋಕಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿತ್ತು.