ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಂಡು-ಹೆಣ್ಣು ದೀರ್ಘಕಾಲ ಒಟ್ಟಿಗಿದ್ದರೆ ವಿವಾಹವಾದಂತೆ:ಸುಪ್ರೀಂ (Supreme Court | marriage | High court | karnataka | Challamma)
ಗಂಡು-ಹೆಣ್ಣು ದೀರ್ಘಕಾಲ ಒಟ್ಟಿಗಿದ್ದರೆ ವಿವಾಹವಾದಂತೆ:ಸುಪ್ರೀಂ
ನವದೆಹಲಿ, ಸೋಮವಾರ, 3 ಆಗಸ್ಟ್ 2009( 09:09 IST )
PTI
ಒಬ್ಬ ಪುರುಷ ಮತ್ತು ಮಹಿಳೆ ದೀರ್ಘ ಕಾಲ ಒಟ್ಟಿಗೆ ವಾಸಿಸುತ್ತಿದ್ದರೆ, ಅವರನ್ನು ಸಮಾಜ ಗಂಡ-ಹೆಂಡತಿ ಎಂದು ಒಪ್ಪಿಕೊಂಡಿದ್ದರೆ ಅವರ ವಿವಾಹ ಕಾನೂನುಬದ್ದ ಎಂದು ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಕುರಿತು ಕರ್ನಾಟಕದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.
ಕರ್ನಾಟಕದ ಚಲ್ಲಮ್ಮ ಎಂಬುವರ ಪುತ್ರ ಕೆ.ಸುಬ್ರಮಣ್ಯ ಎಂಬಾತ ವಿವಾಹಕ್ಕೂ ಮುನ್ನ ಜೀವ ವಿಮೆ ಮಾಡಿಸಿದ್ದ. ತಾಯಿ ಚಲ್ಲಮ್ಮಳನ್ನು ನಾಮಿನಿ ಮಾಡಿದ್ದ. ಸುಬ್ರಮಣ್ಯ ಅಕಾಲಿಕ ಮರಣವನ್ನಪಿದ. ಆಗ ತಾಯಿ ಚಲ್ಲಮ್ಮ ಆತನ ವಿಮೆ ಹಣ ತನಗೆ ಸೇರಬೇಕು ಎಂದು ಹೇಳಿದರು. ಆದರೆ, ತಿಲಗಾ ಎಂಬ ಮಹಿಳೆ ಸುಬ್ರಮಣ್ಯನನ್ನು ನಾನು ಮದುವೆಯಾಗಿದ್ದೇನೆ ಎಂದು ಹೇಳಿದ್ದಳು.
ಆದರೆ ತಿಲಗಾ ತನ್ನ ಪುತ್ರನನ್ನು ವಿವಾಹವಾಗಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಚಲ್ಲಮ್ಮ ವಾದಿಸಿದ್ದಳು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ, ವಿಮಾ ಹಣದ ಪೈಕಿ ನಾಲ್ಕನೇ ಒಂದು ಭಾಗವನ್ನು ಚಲ್ಲಮ್ಮನಿಗೆ ನೀಡಿತು. ಉಳಿದ ಹಣವನ್ನು ತಿಲಗಾಳಿಗೆ ಕೊಟ್ಟಿತ್ತು. ತಿಲಗಾ ಒದಗಿಸಿದ ಸಾಕ್ಷ್ಯವನ್ನು ಪರಿಶೀಲಿಸಿದ ನ್ಯಾಯಾಲಯ ಸುಬ್ರಮಣ್ಯ-ತಿಲಗಾ ನಡುವೆ ವಿವಾಹವಾಗಿದೆ ಎಂಬುದನ್ನು ಒಪ್ಪಿಕೊಂಡಿತ್ತು.
ಈ ತೀರ್ಪನ್ನು ಚಲ್ಲಮ್ಮ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆಕೆಯ ಅರ್ಜಿ ವಜಾಗೊಂಡಿತ್ತು. ಬಳಿಕ ಸುಪ್ರೀಕೋರ್ಟ್ ಮೊರೆ ಹೋಗಿದ್ದರು.