ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಅತ್ಯಾಚಾರಿಗಳ ಕೊಲ್ಲಿ' ಹೇಳಿಕೆಗೆ ಪಶ್ಚಾತಾಪವಿಲ್ಲ: ಪಾಲ್ (Tapas Pal | Krishnanagar | Trinamool Congress | Rapists)
 
"ಅತ್ಯಾಚಾರಿಗಳನ್ನು ಹೊಡೆದು ಕೊಲ್ಲಿ" ಎಂಬುದಾಗಿ ನೀಡಿರುವ ವಿವಾದಾಸ್ಪದ ಹೇಳಿಕೆಗೆ ತನಗೆ ವಿಷಾದವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಟೋಲಿವುಡ್ ನಟ ತಪಾಸ್ ಪಾಲ್ ಹೇಳಿದ್ದಾರೆ. ಅವರು ತನ್ನ ಕ್ಷೇತ್ರ ಕೃಷ್ಣನಗರ್‌ನಲ್ಲಿ ಜನತೆಯನ್ನುದ್ದೇಶಿ ಮಾತನಾಡುತ್ತಾ ನೀಡಿರುವ ಈ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ವಿವಾದ ಹುಟ್ಟುಹಾಕಿದೆ.

ತನ್ನ ಕ್ಷೇತ್ರವ್ಯಾಪ್ತಿಗೆ ಬರುವ ನಾದಿಯಾ ಜಿಲ್ಲೆಗೆ ಭೇಟಿ ನೀಡಿದ ವೇಳೆ, ಕ್ಷೇತ್ರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ನಾಲ್ಕು ಮಹಿಳೆಯರು ಅತ್ಯಾಚಾರಕ್ಕೀಡಾಗಿರುವ ಘಟನೆಗೆ ಪ್ರತ್ರಿಕ್ರಿಯಿಸಿರುವ ಅವರು ಈ ಘಟನೆಗೆ ಕಾರಣರಾದವರನ್ನು ಹೊಡೆಯಿರಿ ಮತ್ತು ಕೊಂದು ಹಾಕಿ ಎಂದು ಸೇರಿದ್ದ ಜನತೆಯನ್ನು ಪ್ರಚೋದಿಸಿದ್ದಾರೆ.

ಆಡಳಿತವು ಜನತೆಗೆ ನ್ಯಾಯ ಒದಗಿಸಲು ವಿಫಲವಾದಲ್ಲಿ ಅತ್ಯಾಚಾರಿಗಳನ್ನು ತಾನೇ ಕೊಂದು ಹಾಕುವೆನೆಂಬ ವಿಪರೀತದ ಹೇಳಿಕೆಯನ್ನೂ ಅವರು ಈ ಸಂದರ್ಭದಲ್ಲಿ ನೀಡಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ