ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಿದ ಬುಂದೇಲ್‌ಖಂಡ್ ಮಂಡಳಿ (Parliament | Bundelkhand | Uttar Pradesh | Madhya Pradesh)
 
ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಬುಂದೇಲ್‌ಖಂಡ್ ಪ್ರಾಂತ್ಯಕ್ಕೆ ಅಭಿವೃದ್ಧಿ ಮಂಡಳಿ ನಿರ್ಮಾಣಕ್ಕೆ ಮುಂದಾಗಿರುವುದು ಸಂಸತ್ತಿನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದು ಉಭಯ ಸದನಗಳ ಮುಂದೂಡಿಕೆಗೆ ಹೇತುವಾಗಿದೆ.

ಬಿಎಸ್ಪಿ ಮತ್ತು ಬಿಜೆಪಿ ಸದಸ್ಯರು ಉಭಯ ಸದನಗಳಲ್ಲಿ ಪ್ರಶ್ನೋತ್ತರ ಅವಧಿಯನ್ನು ಅಮಾನತ್ತುಗೊಳಿಸಿ ಬುಂದೇಲ್‌ಖಂಡ್ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸದೆ ಬುಂದೇಲ್‌ಖಂಡ್ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲು ಹೊರಟಿರುವುದು ಸಾಮ್ರಾಜ್ಯಶಾಹಿಯ ಲಕ್ಷಣವಾಗಿದೆ ಎಂದು ಲೋಕಸಭೆಯಲ್ಲಿ ಉಪನಾಯಕರಾಗಿರುವ ಸುಶ್ಮಾ ಸ್ವರಾಜ್ ದೂರಿದರು. ಇಷ್ಟರಲ್ಲಿ ಬಿಎಸ್‌ಪಿ ಹಾಗೂ ಕಾಂಗ್ರೆಸ್ ಸದಸ್ಯರೂ ಎದ್ದು ನಿಂತು ಮಾತನಾಡಲು ಆರಂಭಿಸಿದ್ದು, ಯಾರು ಏನು ಹೇಳುತ್ತಾರೆ ಎಂಬುದೇ ಕೇಳದ ಪರಿಸ್ಥಿತಿ ನಿರ್ಮಾಣವಾಯಿತು. ಕೋಲಾಹಲ ಮುಂದುವರಿಯುತ್ತಲೇ ಸ್ಪೀಕರ್ ಮೀರಾ ಕುಮಾರ್ ಅವರು ಸದನವನ್ನು ಮುಂದೂಡಿದರು.

ಅಗಲಿದ ಮಾಜಿ ಸದಸ್ಯರಿಗೆ ರಾಜ್ಯಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಣೆಯಾದ ತಕ್ಷಣವೇ, ಎದ್ದು ನಿಂತ ಬಿಎಸ್ಪಿ ಸದಸ್ಯರು ಈ ವಿಚಾರವನ್ನು ಎತ್ತಿದರು. ಇವರನ್ನು ಎಡಪಕ್ಷಗಳು ಮತ್ತು ಬಿಜೆಪಿ ಬೆಂಬಲಿಸಿದ್ದು, ಎಲ್ಲರೂ ಮಾತನಾಡಲಾರಂಭಿಸಿದಾಗ, ಅಧ್ಯಕ್ಷ ಹಮೀದ್ ಅನ್ಸಾರಿ ಅವರು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳುವುದಾಗಿ ನುಡಿದರು. ಆದರೆ ಅವರ ಮಾತು ಗಾಳಿಯಲ್ಲಿ ತೇಲಿಹೋಯಿತು.

"ನನಗೆ ಭಯವಾಗಿದೆ. ಇದು ಕಾನೂನಿಗೆ ವಿರೋಧವಾದುದು. ಸದಸ್ಯರೇ ಕಾನೂನು ಮುರಿಯುತ್ತಿದ್ದಾರೆ. ನನಗೆ ಸದನವನ್ನು ಮುಂದೂಡದೆ ವಿಧಿಯಿಲ್ಲ" ಎಂದು ಅವರು ಸದನವನ್ನು ಮುಂದೂಡುತ್ತಾ ಹೇಳಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ