ಕೇಂದ್ರ ಸರ್ಕಾರಿ ಉದ್ಯೋಗ ಹೊಂದಿರುವ ಮುಸ್ಲಿಮರ ಸಂಖ್ಯೆಯನ್ನು ಹೊಂದಿಲ್ಲ, ಆದರೆ ಒಟ್ಟಾರೆ ಐದು ಅಲ್ಪಸಂಖ್ಯಾದ ಧರ್ಮದವರು ಹೊಂದಿರುವ ಒಟ್ಟು ಉದ್ಯೋಗದ ಸಂಖ್ಯೆಯನ್ನು ಹೊಂದಿರುವುದಾಗಿ ಸರ್ಕಾರ ಹೇಳಿದೆ.
ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯಸಚಿವ(ಸ್ವತಂತ್ರ ಅಧಿಕಾರ) ಸಲ್ಮಾನ್ ಖುರ್ಷೀದ್ ಅವರು ಕೇಂದ್ರ ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಮ್ ಉದ್ಯೋಗಿಗಳ ಅಂಕಿಸಂಖ್ಯೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಮುಸ್ಲಿಂ ಸಮುದಾಯದ ಅಥವಾ ಸೇವೆಯ ಆಧಾರದಲ್ಲಿ ಅಂಕೆಸಂಖ್ಯೆಗಳನ್ನು ಸಂಗ್ರಹಿಸಿಲ್ಲ, ಆದರೆ ಒಟ್ಟಾರೆಯಾಗಿ ಐದೂ ಅಲ್ಪಸಂಖ್ಯಾತ ಸಮುದಾಯಗಳ ಅಂಕೆಸಂಖ್ಯೆಯನ್ನು ಹೊಂದಿರುವುದಾಗಿ ತಿಳಿಸಿದರು.
ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 12,182 ಅಲ್ಪಸಂಖ್ಯಾತರನ್ನು 2006-07ರಲ್ಲಿ ನೇಮಿಸಲಾಗಿದೆ. 2007-08ರಲ್ಲಿ ಈ ಸಂಖ್ಯೆಯು 12,195 ಆಗಿತ್ತು ಮತ್ತು 2008-09ರಲ್ಲಿ 4,479 ಎಂಬುದಾಗಿ ಎಂದವರು ಸದನಕ್ಕೆ ತಿಳಿಸಿದರು.