ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪರಿಶಿಷ್ಟ ಕ್ಷೇತ್ರ ಮೀಸಲಾತಿ ವಿಸ್ತರಣೆ ಮಸೂದೆಗೆ ಅಸ್ತು (Rajya Sabha | SCs/ST | reservation | Bill)
 
ಲೋಕಸಭೆ ಹಾಗೂ ರಾಜ್ಯ ಶಾಸನಸಭೆಗಳ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳ ಕ್ಷೇತ್ರ ಮೀಸಲಾತಿಯನ್ನು 10 ವರ್ಷಗಳಿಗೆ ವಿಸ್ತರಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

ಇದೇ ಮಸೂದೆಯು ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ನಾಮನಿರ್ದೇಶನವನ್ನು 10 ವರ್ಷಗಳಿಗೆ ವಿಸ್ತರಿಸಿದೆ. ಸಂವಿಧಾನ ತಿದ್ದುಪಡಿ(109ನೆ ತಿದ್ದುಪಡಿ) ಮಸೂದೆ 2009ನ್ನು ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಅವರು ರಾಜ್ಯಸಭೆಯಲ್ಲಿ ಮಂಡಿಸಿದರು.

ಸಂವಿಧಾನದ ವಿಧಿ 334ರ ಪ್ರಕಾರದ ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಮೀಸಲಾತಿಯು 2010ರ ಜನವರಿ 25ರಂದು ಮುಗಿಯಲಿದ್ದು, ಪ್ರಸಕ್ತ ಮಸೂದೆಯಿಂದಾಗಿ ಇದು ಇನ್ನೂ ಹತ್ತುವರ್ಷಗಳಿಗೆ ವಿಸ್ತರಣೆಯಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ