ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಂದಿ ಜ್ವರಕ್ಕೆ ಭಾರತದಲ್ಲಿ ಮೊದಲ ಬಲಿಯಾದ ಬಾಲಕಿ (India | swine flu | Pune | Riya Shiekh)
 
ಸೋಮವಾರ ಪುಣೆಯಲ್ಲಿ 14ರ ಹರೆಯದ ವಿದ್ಯಾರ್ಥಿನಿಯೊಬ್ಬಳು ಎಚ್1ಎನ್1 ಸೋಂಕಿನಿಂದ ಸಾವನ್ನಪ್ಪುವುದರ ಮೂಲಕ ಭಾರತದಲ್ಲಿ ಹಂದಿ ಜ್ವರಕ್ಕೆ ಮೊದಲ ಬಲಿಯಾದಂತಾಗಿದೆ.

ಸೋಂಕು ತಗುಲಿದ್ದ ಬಾಲಕಿ ಕಳೆದ ಹಲವಾರು ದಿನಗಳಿಂದ ಪುಣೆಯಲ್ಲಿನ ಆಸ್ಪತ್ರೆಯೊಂದರಲ್ಲಿ ತುರ್ತು ನಿಗಾ ವಿಭಾಗದಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಈ ಬಾಲಕಿಯನ್ನು ರಿಯಾ ಶೇಖ್ ಎಂದು ಗುರುತಿಸಲಾಗಿದೆ.

ಸಾವನ್ನಪ್ಪಿದ ಹುಡುಗಿ ವಿದೇಶಕ್ಕೆ ಪ್ರಯಾಣ ಬೆಳೆಸದ ಹೊರತಾಗಿಯೂ ಆಕೆಗೆ ಹಂದಿ ಜ್ವರ ಸೋಂಕು ತಗುಲಿತ್ತು. ಇದರ ಬೆನ್ನಲ್ಲೇ ಪುಣೆಯಲ್ಲಿ 16 ಮಂದಿ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವರದಿಗಳೂ ಬಂದಿವೆ.

ಪುಣೆಯಲ್ಲಿ ಇತರ ಮೂವರು ವ್ಯಕ್ತಿಗಳಿಗೂ ಎಚ್1ಎನ್1 ವೈರಸ್ ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಹಂದಿ ಜ್ವರ ಪೀಡಿತರ ಸಂಖ್ಯೆ 101ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಜರ್ಮನಿಯಿಂದ ವಾಪಸಾಗಿದ್ದ 26ರ ಒಬ್ಬ ಯುವಕ ಮತ್ತು ಇತರ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 64 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜುಲೈ 31ರ ವರದಿ ಪ್ರಕಾರ ದೇಶದಲ್ಲಿ ಒಟ್ಟಾರೆ 525 ಹಂದಿ ಜ್ವರ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ ಮಹಾರಾಷ್ಟ್ಪದ್ದೇ 147 ಪ್ರಕರಣಗಳು ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ