ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಫ್ರೆಂಡ್‌ಶಿಫ್ ಡೇಯಂದು ರೇಪ್ ಮಾಡಿದ ಫ್ರೆಂಡ್ಸ್: ಬಾಲಕಿ ಆತ್ಮಹತ್ಯೆ (Friendship Day | boyfriend | pals | Rape)
 
ಹದಿಹರೆಯದ ಮುಂಬೈ ಬಾಲಕಿಯೊಬ್ಬಳಿಗೆ ಸ್ನೇಹಿತರ ದಿನಾಚರಣೆ ಅತ್ಯಂತ ದುಬಾರಿಯಾಗಿದೆ. ಸ್ನೇಹದ ಆಚರಣೆಗೆ ತೆರಳಿದ 15ರ ಪ್ರಾಯದದ ಎಸ್ಎಸ್‌ಸಿ ವಿದ್ಯಾರ್ಥಿನಿ ತನ್ನ ಬಾಯ್‌ಫ್ರೆಂಡ್ ಹಾಗೂ ಆತನ ಮೂವರು ಸ್ನೇಹಿತರಿಂದ ಅತ್ಯಾಚಾರಕ್ಕೀಡಾಗಿದ್ದು, ಅವಮಾನ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡು ತನ್ನ ಬದುಕಿನ ದುರಂತ ಅಂತ್ಯಕಂಡಿರುವುದಾಗಿ ವರದಿಯಾಗಿದೆ.

ಆರೋಪಿಗಳೆಲ್ಲರೂ 20ರಿಂದ 21ರ ಹರೆಯದವರು. ಇವರನ್ನು ನಲಸೋಪಾರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

"ಶನಿವಾರ ಅಪರಾಹ್ನ ಕೋಚಿಂಗ್ ಕ್ಲಾಸ್‌ಗೆ ಹಾಜರಾಗಲು ಈ ಹುಡುಗಿ ಮನೆಯಿಂದ ತೆರಳಿದ್ದಳು. ಬಳಿಕ ಆಕೆ ತನ್ನ ಬಾಯ್‌ಫ್ರೆಂಡ್ ರಾಜೀವ್ ಎಂಬಾತನ್ನು ಭೇಟಿಯಾಗಿದ್ದು ಆತನೊಂದಿಗೆ ಗೆಳೆಯರ ದಿನ ಆಚರಿಸಲು ನಿರ್ಧರಿಸಿದ್ದಳು. ತಮ್ಮಿಬ್ಬರ ಕಾಮನ್ ಫ್ರೆಂಡ್ ಆಗಿರುವ ಸಂಜಯ್‌ನನ್ನು ಈ ಇಬ್ಬರು ಬಳಿಕ ಭೇಟಿಯಾದರು. ಈತ ಈ ಹುಡುಗಿಯನ್ನು ರಾಜೀವ್‌ನಿಗೆ ಪರಿಚಯಿಸಿದ್ದು, ರಾಜೀವ್‌ನೊಂದಿಗೆ ಆಕೆ ಕಳೆದ ಆರು ತಿಂಗಳಿಂದ ಸುತ್ತಾಡುತ್ತಿದ್ದಳು" ಎಂಬುದಾಗಿ ಹಿರಿಯ ಪೊಲೀಸಧಿಕಾರಿ ಪಿ. ಮಾನೆ ತಿಳಿಸಿದ್ದರು.

ಅವರು ಬಳಿಕ ಈಕೆಯನ್ನು ಪಶ್ಚಿಮ ನಲಸೋಪರದಲ್ಲಿರುವ ಶ್ರೀ ಪ್ರಷ್ಟ ದಲ್ಲಿನ ಫನ್ ಫಿಯೆಸ್ಟಾ ಥಿಯೇಟರ್‌‍ಗೆ ಕರೆದೊಯ್ದಿದ್ದರು. ಇಲ್ಲಿ ಇವರು ಇನ್ನಿಬ್ಬರು ಆರೋಪಿಗಳನ್ನು ಭೇಟಿಯಾದರು. ಈ ಬಾಲಕಿಯು ಅವರನ್ನು ಭೇಟಿಯಾಗುತ್ತಿರುವುದು ಇದೇ ಮೊದಲು. ಬಳಿಕ ಶನಿವಾರ ರಾತ್ರಿ ಈ ಎಲ್ಲರೂ ಕಾರಿನೊಳಗೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಾಲಕಿ ತಡರಾತ್ರಿ ಮನೆಗೆ ಹಿಂದಿರುಗಿದ್ದು ತನ್ನ ತಾಯಿ ಅಥವಾ ಇತರರಿಗೆ ಏನನ್ನೂ ತಿಳಿಸಿರಲಿಲ್ಲ. ಆಕೆಯ ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ" xದು ಪೊಲೀಸ್ ಮೂಲಗಳು ತಿಳಿಸಿವೆ.

ಭಾನುವಾರ ಮಗಳನ್ನು ಎಬ್ಬಿಸಲು ತಾಯಿ ಮಗಳ ಕೋಣೆಗೆ ತೆರಳಿದಾಗ ಆಕೆ ತನ್ನ ಕೊಠಡಿಯ ಫ್ಯಾನಿನನಲ್ಲಿ ಶವಾವಾಗಿ ನೇತಾಡುತ್ತಿದ್ದಳು. ಯಾವುದೇ ಆತ್ಮಹತ್ಯ ಪತ್ರ ಕಂಡು ಬಂದಿರಲಿಲ್ಲ.

ಬಲಿಪಶುವಿನ ಮರಣೋತ್ತರ ಪರೀಕ್ಷೆಯು ಆಕೆ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿರುವುದನ್ನು ತಿಳಿಸಿದೆ. ರಾಜೀವ್ ಎಂಬ 10ನೆ ತರಗತಿಯಲ್ಲಿ ನಪಾಸಾಗಿರುವ ಹುಡುಗ ಈಕೆಗೆ ಸ್ನೇಹಿತನಾಗಿದ್ದ ಎಂಬುದು ತನಿಖೆಯಿಂದ ತಿಳಿದಿದೆ. ಈತ ನಿರುದ್ಯೋಗಿಯಾಗಿದ್ದ. ಸಂಜಯ್ ಎಂಬಾತ ರಾಜೀವ್‌ನ ಜತೆಗಿರುತ್ತಿದ್ದು, ಇತ್ತೀಚೆಗೆ ಈ ಹುಡುಗಿಯನ್ನ ಆತನಿಗೆ ಪರಿಚಯಿಸಿದ್ದ. ಸಂಜಯ್ ಹಾಗೂ ಇತರ ಇಬ್ಬರು ಆರೋಪಿಗಳು ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿಂದ ಕಾರೊಂದನ್ನು ತಂದಿದ್ದು ಈ ದುಷ್ಕೃತ್ಯ ಎಸಗಿದ್ದಾರೆ" ಎಂದು ಪೊಲೀಸ್ ಮೂಲಗಳು ಹೇಳಿವೆ.

ಒಟ್ಟಾರೆಯಾಗಿ, ಸ್ವೇಚ್ಚೆಯ ಪಾಶ್ಚಾತ್ಯ ಅನುಕರಣೆಯು ಬಾಳಿ ಬದುಕಬೇಕಾದ ಜೀವ ಒಂದು ಅನ್ಯಾಯವಾಗಿ ತನ್ನ ಜೀವನವನ್ನು ಮುಗಿಸಿಕೊಳ್ಳುವಂತೆ ಮಾಡಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ