ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಂದಿಜ್ವರ: ಆಸ್ಪತ್ರೆ ವಿರುದ್ಧ ಮೃತಬಾಲಕಿಯ ಕುಟುಂಬಿಕರಿಂದ ಕೇಸು (swine flu | Rida Shaikh | Jahangir Hospital | doctor)
 
ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ಹಂದಿಜ್ವರ ಸೋಂಕುಪೀಡಿತ ಬಾಲಕಿಯೊಬ್ಬಳು ಹತಳಾಗಿರುವ ಹಿನ್ನೆಲೆಯಲ್ಲಿ, ರೋಗವನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಲು ವಿಫಲವಾಗಿರುವ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲು ಬಾಲಕಿಯ ಕುಟುಂಬಿಕರು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

ಬಾಲಕಿ ದಾಖಲಾಗಿದ್ದ ಜಹಾಂಗೀರ್ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಚಿಕಿತ್ಸೆ ನೀಡಿರುವ ವೈದ್ಯರನ್ನು ತಪ್ಪಿತಸ್ಥರೆಂದು ದೂರಿರುವ ಬಾಲಕಿ ರಿದಾ ಶೇಕ್‌ಳ ಕುಟುಂಬಿಕರು ಇವರೇ ತಮ್ಮ ಪುತ್ರಿಯ ಸಾವಿಗೆ ಕಾರಣ ಎಂದು ದೂರಿದ್ದಾರೆ. ಅಲ್ಲದೆ ಬಾಲಕಿಗೆ ಚಿಕಿತ್ಸೆ ನೀಡಿರುವ ವೈದ್ಯ ವೃತ್ತಿ ನಡೆಸದಂತೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಪೊಲೀಸ್ ದೂರು ನೀಡುವುದಾಗಿ ಕುಟುಂಬ ವಕೀಲರಾದ ಅಸಿಫ್ ಲಾಂಪ್ವಾಲಾ ಹೇಳಿದ್ದು, ಆಸ್ಪತ್ರೆಯನ್ನು ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ಕಾನೂನಿನ ಕಟಕಟೆಗೆ ತರಬೇಕು ಎಂದು ಹೇಳಿದ್ದಾರೆ.

ಪುಣೆಯಲ್ಲಿ ಬಾಲಕಿಯ ಕುಟುಂಬದವರೊಂದಿಗೆ ಮಂಗಳವಾರ ಅಪರಾಹ್ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಕೀಲರು ಆಸ್ಪತ್ರೆಯ ವಿರುದ್ಧ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ತಪ್ಪಿತಸ್ಥ ಆಸ್ಪತ್ರೆಯಿಂದ ದೊಡ್ಡ ಮೊತ್ತದ ಪರಿಹಾರ ಕೇಳುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ