ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸತ್ತೇನು, ಆದರೆ ರಾಜೀನಾಮೆ ನೀಡೆ: ಬೂಟಾ ಸಿಂಗ್ (Buta Singh | NCSC | Congress | Mumbai)
 
ನವದೆಹಲಿ: ಬೂಟಾ ಸಿಂಗ್ ಅವರು ಕಾಂಗ್ರೆಸ್ ಕಾರ್ಯಕರ್ತ ಎಂಬುದಕ್ಕಿಂತ, ಅವರೊಬ್ಬ ಸಾಂವಿಧಾನಿಕ ಕಾರ್ಯಕರ್ತ ಎಂಬುದಾಗಿ ಎನ್‌ಸಿಎಸ್‌ಸಿ ಅಧ್ಯಕ್ಷ ಬೂಟಾಸಿಂಗ್ ಅವರನ್ನು ಕಾಂಗ್ರೆಸ್ ವರ್ಣಿಸಿದ ಮರುದಿನವಾದ ಮಂಗಳವಾರದಂದು, ಸಿಂಗ್ ಅವರು "ತನ್ನ ಪ್ರಕರಣವನ್ನು ತಾನೇ ಸಮರ್ಥಿಸಿಕೊಳ್ಳುತ್ತೇನೆ, ತನಗೆ ಪಕ್ಷದ ಬೆಂಬಲ ಬೇಕಿಲ್ಲ" ಎಂದು ಹೇಳಿದ್ದಾರೆ. ತಾನೊಬ್ಬ ದಲಿತ ವಿಮೋಚಕ ಎಂಬುದಾಗಿ ಸ್ವಯಂ ಬಣ್ಣಿಸಿಕೊಂಡಿರುವ ಸಿಂಗ್, ತಾನು ದಲಿತ ಸಮುದಾಯಕ್ಕಾಗಿ ಜೀವನ ಪರ್ಯಂತ ಸೇವೆಸಲ್ಲಿಸಿದ್ದು, ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಹೇಳಿದರೆ ಪ್ರಾಣತೊರೆಯುವುದಾಗಿ ತಿಳಿಸಿದ್ದಾರೆ.

"ನಾನು ಸತ್ಯದೊಂದಿಗೆ ಇರುವುದರಿಂದ ತನ್ನ ಪ್ರಕರಣವನ್ನು ತಾನೇ ಸ್ವಯಂ ಸಮರ್ಥಿಸಿಕೊಳ್ಳಲು ಶಕ್ತನಾಗಿದ್ದು, ತನಗೆ ಪಕ್ಷದ ಬೆಂಬಲದ ಅವಶ್ಯಕತೆ ಇಲ್ಲ" ಎಂದು ಹೇಳಿದ್ದಾರೆ.

ಆಯೋಗದ ಮುಂದೆ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣ ಒಂದರ ಆರೋಪಿ ನಾಸಿಕ್ ಮೂಲದ ರಾಮರಾವ್ ಪಾಟೀಲ್ ಎಂಬವರನ್ನು ಬೂಟಾ ಸಿಂಗ್ ಪುತ್ರ ಸರೋಬ್ಜಿತ್ ಅಲಿಯಾಸ್ ಸ್ವೀಟಿ ಸಿಂಗ್ ಅವರು ಒಂದು ಕೋಟಿ ಲಂಚಕ್ಕಾಗಿ ಒತ್ತಾಯಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧನಕ್ಕೀಡು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೂಟಾ ಸಿಂಗ್ ಅವರನ್ನೂ ಸಿಬಿಐ ತನಿಖೆಗೊಳಪಡಿಸಲಿದೆ ಎಂದು ಹೇಳಲಾಗಿದೆ.

ತಾನು ಸಂಸತ್ತಿನ ಒಳಗೆ ಮತ್ತು ಹೊರಗೆ ದಲಿತರಿಗಾಗಿ ತನ್ನ ಜೀವನದುದ್ದಕ್ಕೂ ಹೋರಾಡುತ್ತಲೇ ಬಂದಿದ್ದು, ಬಡ ದಲಿತರ ಪ್ರಾಣ ಉಳಿಸಿದ್ದೇನೆ. ನಾನು ಕೆಲಸವನ್ನು ಬಿಡಲಾರೆ. ಯಾರಾದರೂ ರಾಜೀನಾಮೆ ನೀಡಲು ಹೇಳಿದಲ್ಲಿ ಜೀವವನ್ನೆ ತೊರೆಯುತ್ತೇನೆ ಎಂದು ಅವರು ಹೇಳಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ