ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೊಸೆಗೆ ಅತ್ತೆ ಒದೆಯೋದು ಹಿಂಸೆಯಲ್ಲ: ಸುಪ್ರೀಂಕೋರ್ಟ್ (Supreme court | High court | Police | New delhi)
 
PTI
ಅತ್ತೆ ಅಥವಾ ಮನೆಯ ಇತರ ಸದಸ್ಯರು ಒದ್ದರೆ ಅಥವಾ ವಿಚ್ಛೇದನ ಬೆದರಿಕೆ ಒಡ್ಡಿದರೆ ಅದು ಹಿಂಸಾಚಾರವಲ್ಲ ಹೀಗೆಂದು ತೀರ್ಪು ನೀಡಿ ಅಚ್ಚರಿ ಮೂಡಿಸಿದ್ದು ಸುಪ್ರೀಂಕೋರ್ಟ್.

ಅತ್ತೆ ಸೊಸೆಗೆ ಹೀಗೆ ನಡೆದುಕೊಳ್ಳಬೇಕು ಹಾಗೇ ನಡೆದುಕೊಳ್ಳಬೇಕು ಎಂದು ಪದೇಪದೇ ತಾಕೀತು ಮಾಡುತ್ತಿದ್ದಲ್ಲಿ, ತಾನು ಬಳಸಿದ ಬಟ್ಟೆಗಳನ್ನು ನೀಡಿ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಲ್ಲಿ ಐಪಿಸಿಯ 498ಎ ಸೆಕ್ಷನ್(ಕ್ರೌರ್ಯದ ವಿರುದ್ಧದ ಕಾನೂನು) ಅಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಬಿ.ಸಿನ್ನಾ ಹಾಗೂ ಸಿರಿಯಾಕ್ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ, ಮದುವೆಯ ಸಮಯದಲ್ಲಿ ದಂಪತಿಗೆ ನೀಡಿದ ಉಡುಗೊರೆಗಳನ್ನು ಅತ್ತೆ ಕಿತ್ತುಕೊಂಡು ಹೋದಲ್ಲಿ ಇದು 'ನಂಬಿಕೆ ದ್ರೋಹ'ವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ದಕ್ಷಿಣ ಆಫ್ರಿಕ ಮೂಲದ ಅನಿವಾಸಿ ಭಾರತೀಯ ಪತಿ ಹಾಗೂ ಅತ್ತೆ ಮನೆಯವರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸುತ್ತಿದ್ದ ಕೋರ್ಟ್ ಈ ತೀರ್ಪು ನೀಡಿದೆ.

ಅತ್ತೆ ತನಗೆ ಕಾಲಿನಿಂದ ಒದ್ದಳು. ತನ್ನ ತಾಯಿ ಸುಳ್ಳುಗಾರ್ತಿ ಎಂದು ಜರಿದಳು. ತನ್ನ ಪತಿಯನ್ನು ತನ್ನ ವಿರುದ್ಧ ಎತ್ತಿಕಟ್ಟಿದಳು. ತನ್ನ ಮಗಳ ಬಳಸಿದ ಉಡುಪುಗಳನ್ನು ತನಗೆ ತೊಡಲು ಕೊಟ್ಟಳು ಎಂದು ಸೊಸೆ ದೂರಿದ್ದಳು. ಆದರೆ, ಈ ಘಟನೆಗಳನ್ನು ಕ್ರೌರ್ಯ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಪೆಕ್ಸ್ ಕೋರ್ಟ್ ತಿಳಿಸಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ