ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐತಿಹಾಸಿಕ ಶಿಕ್ಷಣ ಮಸೂದೆಗೆ ಸಂಸತ್ ಅಸ್ತು (Education Bill | Parliament | Kapil Sibal | UPA)
 
PTI
6ರಿಂದ 14ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಐತಿಹಾಸಿಕ ಮಸೂದೆಯನ್ನು ಸಂಸತ್ ಮಂಗಳವಾರ ಅಂಗೀಕರಿಸಿದೆ.

ಅಂಗವಿಕಲರಿಗೂ ಇತರೆ ವಿದ್ಯಾರ್ಥಿಗಳ ಜೊತೆಯೇ ಶಿಕ್ಷಣ ನೀಡುವ ಮಹತ್ವದ ಅಂಶವನ್ನು ಮಸೂದೆ ಒಳಗೊಂಡಿದೆ. ಮಸೂದೆಯ ಅನ್ವಯ 6ರಿಂದ 14ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವುದು ಕಡ್ಡಾಯ. ಶಿಕ್ಷಣ ಉಚಿತವಾಗಿರಬೇಕು. ಖಾಸಗಿ ಶಾಲೆಗಳಲ್ಲಿ ಬಡಮಕ್ಕಳಿಗೆ ಶೇ.25ರಷ್ಟು ಸೀಟು ಮೀಸಲಿಡಬೇಕು.

ಶಾಲಾ ದಾಖಲಾತಿ ವೇಳೆ ವಿದ್ಯಾರ್ಥಿಯನ್ನಾಗಲಿ, ಪೋಷಕರನ್ನಾಗಲಿ ಯಾವುದೇ ಸಂದರ್ಶನದ ಪರೀಕ್ಷೆಗೆ ಒಳಪಡಿಸುವಂತಿಲ್ಲ. ಪ್ರಧಾನಿ ಸಿಂಗ್ ಅವರ 100 ದಿನಗಳ ಕಾರ್ಯಾನುಷ್ಠಾನ ಗುರಿಯಡಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಈ ಮಸೂದೆ ಸಿದ್ದಪಡಿಸಿ ಅದನ್ನು ಜಾರಿಗೆ ತರಲು ಮುಂದಾಗಿತ್ತು.

ಮಸೂದೆಯನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿತ್ತು. ಅದಕ್ಕೆ ಪೂರಕವಾಗಿ ಲೋಕಸಭೆ ಮಂಗಳವಾರ ಈ ಮಸೂದೆಗೆ ಅನುಮೋದನೆ ನೀಡಿತು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ