ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಾಲೂ, ಬಾಲೂ, ಮಮತಾ, ಗೌಡರಿಗೆ ಮುಂದಿನ ಸಾಲು (UPA | Sharad Pawar | Deve Gowda | Lalu)
 
ಲೋಕಸಭೆಯಲ್ಲಿ ಮುಂದಿನ ಸಾಲಿನ ಆಸನಗಳ ಹಂಚುವಿಕೆ ಅಂತಿಮಗೊಂಡಿದ್ದು, ಯುಪಿಎಯು ತನ್ನ ಕೋಟಾದ ಅರ್ಧದಷ್ಟು ಸ್ಥಾನಗಳನ್ನು ತನ್ನ ಪಾಲುದಾರ ಪಕ್ಷಗಳು ಹಾಗೂ ಮಿತ್ರರಿಗೆ ಬಿಟ್ಟುಕೊಟ್ಟಿದೆ.

ಹಾಗಾಗಿ ಇದೀಗ ಮಾಜಿಪ್ರಧಾನಿ ಜೆಡಿಎಸ್ ವರಿಷ್ಠ ದೇವೇಗೌಡ, ಕೃಷಿ ಸಚಿವ ಶರದ್ ಪವಾರ್(ಎನ್‌ಸಿಪಿ), ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ(ತೃಣಮೂಲ ಕಾಂಗ್ರೆಸ್), ಟಿ.ಆರ್. ಬಾಲು(ಡಿಎಂಕೆ) ಹಾಗೂ ಲಾಲೂ ಪ್ರಸಾದ್ ಯಾದವ್(ಆರ್‌ಜೆಡಿ) ಅವರುಗಳು ಮುಂದಿನ ಪಂಕ್ತಿಯಲ್ಲಿ ಆಸೀನರಾಗಲಿದ್ದಾರೆ.

ಮಂತ್ರಿಮಂಡಲದಲ್ಲಿ ಜಾಗಗಿಟ್ಟದ ಕಾಂಗ್ರೆಸ್ ಉಪನಾಯಕ ಸಿಸ್ ರಾಮ್ ಓಲಾರಿಗೂ ಪರಿಹಾರವೆಂಬಂತೆ ಮುಂದಿನ ಬೆಂಚಿನಲ್ಲಿ ಜಾಗಸಿಕ್ಕಿದೆ. ಉಳಿತದಂತೆ ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಹಾಗೂ ಸದನದ ನಾಯಕ ಪ್ರಣಬ್ ಮುಖರ್ಜಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಗೃಹಸಚಿವ ಪಿ.ಚಿದಂಬರಂ ಅವರುಗಳು ಎದುರು ಸಾಲಿನ ನಾಯಕರಾಗಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಬಿಎಸ್‌ಪಿ ನಾಯಕ ದಾರಾ ಸಿಂಗ್ ಚೌವಾಣ್ ಬಳಿ ಜಾಗ ಪಡೆದಿದ್ದಾರೆ. ಸಿಪಿಎಂ ನಾಯಕ ಬಸುದೇವ್ ಆಚಾರ್ಯಾ ಅವರು ಜೆಡಿಯು ನಾಯಕ ಶರದ್ ಯಾದವ್ ಜೊತೆ ಮೊದಲ ಬೆಂಚನ್ನು ಹಂಚಿಕೊಳ್ಳಲಿದ್ದಾರೆ.

ಬಿಜೆಪಿ ಪ್ರಮುಖ ನಾಯಕರು ಈಗಾಗಲೇ ಮುಂದಿನ ಬೆಂಚು ಹಿಡಿದಿದ್ದಾರೆ. ಡೆಪ್ಯೂಟಿ ಸ್ಪೀಕರ್ ಕರಿಯಾ ಮುಂಡ, ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ, ಲೋಕಸಭೆಯಲ್ಲಿ ಉಪನಾಯಕಿ ಸುಶ್ಮಾ ಸ್ವರಾಜ್, ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಮಾಜಿ ಅಧ್ಯಕ್ಷ ಮುರಳಿ ಮನೋಹರ್ ಜೋಷಿ ಹಾಗೂ ಮಾಜಿ ಮಂತ್ರಿ ಜಸ್ವಂತ್ ಸಿಂಗ್ ಅವರು ಮುಂದಿನ ಬೆಂಚಿನ 'ಹುಡುಗರು'
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ