ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಂದಿಜ್ವರ: ರಿದಾ ಕುಟುಂಬಿಕರಿಂದ ಕೇಸು, ಮತ್ತೆ 3 ಶಾಲಾಬಾಲಕಿಯರಿಗೆ ಸೋಂಕು (Swine flu | FIR | Jehangir | Ruby)
 
ಹಂದಿಜ್ವರಕ್ಕೆ ರಾಷ್ಟ್ರದಲ್ಲಿ ಮೊದಲ ಬಲಿಯಾಗಿರುವ ಬಾಲಕಿಯ ಹೆತ್ತವರು ಪುಣೆಯ ಎರಡು ಖಾಸಗೀ ಆಸ್ಪತ್ರೆಯ ವೈದ್ಯರುಗಳ ವಿರುದ್ಧ ಗುರುವಾರ ಎಫ್ಐಆರ್ ದಾಖಲಿಸಿದ್ದಾರೆ. ಮೃತ ರಿದಾ ಶೇಕ್‌ಳ ಚಿಕ್ಕಮ್ಮ ಆಯೇಶಾ ಶೇಕ್ ಅವರು ಈ ಆಸ್ಪತ್ರೆಗಳ ನಿರ್ಲಕ್ಷದಿಂದಾಗೇ 14ರ ಹರೆಯದ ರಿದಾ ಶೇಕ್ ಸಾವನ್ನಪ್ಪಿದ್ದಾಳೆ ಎಂದು ದೂರಿದ್ದಾರೆ.

ರಿದಾಳಿಗೆ ಚಿಕಿತ್ಸೆ ನೀಡಿರುವ ಜಹಾಂಗೀರ್ ಹಾಗೂ ರೂಬಿ ಆಸ್ಪತ್ರೆಗಳ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಕುಟುಂಬದ ವಕೀಲರಾಗಿರುವ ಆಸೀಫ್ ಲಂಪ್ವಾಲ ಹೇಳಿದ್ದಾರೆ. ಈ ಎರಡು ಆಸ್ಪತ್ರೆಗಳಿಗೆ ಪರಸ್ಪರ ಹೊಂದಾಣಿಕೆ ಇದೆ ಎಂದು ಅವರು ದೂರಿದ್ದಾರೆ.

ರಿದಾಳ ಇಬ್ಬರು ಸಹಪಾಟಿಗಳಿಗೂ ಸ್ವೈನ್ ಫ್ಲೂ
ಇದೇ ವೇಳೆ ರಿದಾ ಶೇಕ್ ಕಲಿಯುತ್ತಿದ್ದ ಸೈಂಟ್ ಆನ್ಸ್ ಶಾಲೆಯ ಮೂವರು ಬಾಲಕಿಯರು ಸೇರಿದಂತೆ ಒಟ್ಟು ಒಂಬತ್ತು ಮಂದಿಗೆ ಹಂದಿಜ್ವರದ ಸೋಂಕು ತಗುಲಿದೆ. ಇದರೊಂದಿಗೆ ಹಂದಿಜ್ವರ ಸೋಂಕಿರುವ ಶಿಕ್ಷಣ ಸಂಸ್ಥೆಗಳ ಪಟ್ಟಿಗೆ ಮತ್ತೂ ಎರಡು ಶಾಲೆಗಳನ್ನು ಸೇರಿಸಲಾಗಿದೆ ಎಂದು ಆರೋಗ್ಯಾಧಿಕರಿಗಳು ತಿಳಿಸಿದ್ದಾರೆ.

ರಿದಾ ಕಲಿಯುತ್ತಿದ್ದ ಶಾಲೆಯಲ್ಲಿ ಮತ್ತೂ ಮೂರು ಮಕ್ಕಳಲ್ಲಿ ಸೋಂಕು ಪತ್ತೆಯಾಗಿರುವುದು, ಈ ರೋಗದ ವೈರಸ್ ಶಾಲೆಯಲ್ಲಿ ಹಬ್ಬಿರಬಹುದು ಎಂಬ ಭೀತಿಗೆ ಕಾರಣವಾಗಿದೆ.

ಸೈಂಟ್ ಹೆಲೆನಾ ಹಾಗೂ ಲೋಯೆಲ್ಲಾ ಶಾಲೆಗಳಲ್ಲೂ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ ಎಂಬುದಾಗಿ ರಾಜ್ಯ ಆರೋಗ್ಯ ಇಲಾಖಾಧಿಕಾರಿ ಡಾ| ರವೀಂದ್ರ ಕಟ್ಟಿ ಹೇಳಿದ್ದಾರೆ.

ಇದರಿಂದಾಗಿ ಪುಣೆಯಲ್ಲಿ ಒಟ್ಟು ಎಚ್1ಎನ್1 ಸೋಂಕು ತಗುಲಿದವರ ಸಂಖ್ಯೆ ಈಗ 118 ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಒಟ್ಟು 172 ಪ್ರಕರಣಗಳಲ್ಲಿ ಸಿಂಹಪಾಲು ಪುಣೆಗೆ ಸೇರಿದೆ.

ಸೋಂಕು ತಪಾಸಣೆಗೆ ನೂಕುನುಗ್ಗಲು
ಶಾಲೆಗಳಲ್ಲಿ ಸೋಂಕು ವ್ಯಾಪಿಸಿರುವ ಈ ಸುದ್ದಿ ಹರಡುತ್ತಿರುವಂತೆ ಸಾವಿರಾರು ಮಂದಿ ಭಯಭೀತ ಮಂದಿ ಸರ್ಕಾರ ನಡೆಸುತ್ತಿರುವ ನಾಯ್ಡು ಆಸ್ಪತ್ರೆಗೆ ಧಾವಿಸುತ್ತಿದ್ದು, ಸೋಂಕು ಪತ್ತೆ ಪರೀಕ್ಷೆ ನಡೆಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.

ರೋಗಗಕ್ಕೆ ಪುಣೆಯಲ್ಲಿ ಮೊದಲ ಬಲಿಯಾಗಿರುವ ಹಿನ್ನೆಲೆಯಲ್ಲಿ, ಇದೀಗ ಭಯಗೊಂಡಿರುವ ಮಂದಿ ಅತ್ಯಲ್ಪ ಪ್ರಮಾಣದ ಕೆಮ್ಮು ಮತ್ತು ಶೀತವಿದ್ದರೂ ಉದ್ವಿಗ್ನಗೊಳ್ಳುತ್ತಿದ್ದು ಹಂದಿಜ್ವರ ವೈರಸ್ ಸೋಂಕಿನ ಪರೀಕ್ಷೆಗೆ ಮುಂದಾಗುತ್ತಿದ್ದಾರೆ.

ಸಾವಿರಾರು ಮಂದಿ ಆಸ್ಪತ್ರೆಯ ಮುಂದೆ ನೆರೆದಿದ್ದು, ಸಣ್ಣಪುಟ್ಟ ಘರ್ಷಣೆಗಳೂ ನಡೆದಿವೆ. ನಸುಕಿನಿಂದಲೇ ಆಸ್ಪತ್ರೆ ಮುಂದೆ ಜಮಾಯಿಸಿರುವ ಭಾರೀ ಜನಸಮೂಹವನ್ನು ನಿಭಾಯಿಸುವುದೇ ಆಸ್ಪತ್ರೆಯ ವೈದ್ಯರು ಹಾಗೂ ಇತರ ಸಿಬ್ಬಂದಿಗೆ ಹರಸಾಹಸವಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ