ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೋಯ್ಡಾಗೆ ಮೇಟ್ರೋ ವಿಸ್ತರಣೆ ಮಸೂದೆ ಅಂಗೀಕಾರ (Lok Sabha | Noida | Gurgaon | Metro Railway)
 
ದೆಹಲಿ ಮೆಟ್ರೋ ರೈಲನ್ನು ಪಕ್ಕದ ಸೆಟಲೈಟ್ ಪಟ್ಟಣಗಳಾದ ನೋಯ್ಡಾ ಹಾಗೂ ಗುರ್ಗಾಂವ್‌ಗಳಿಗೆ ವಿಸ್ತರಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾಗಿದೆ.

ನಗರಾಭಿವೃದ್ಧಿ ಸಚಿವ ಎಸ್. ಜೈಪಾಲ್ ರೆಡ್ಡಿ ಅವರು ಈ ಮಸೂದೆಯನ್ನು ಮಂಡಿಸಿದ್ದು ಇದು ಅವಿರೋಧವಾಗಿ ಅಂಗೀಕಾರವಾಯಿತು. ಗುರ್ಗಾಂವ್ ಹಾಗೂ ನೋಯ್ಡಾಗೆ ರೈಲು ಸೇವೆಯ ನಿರ್ಮಾಣ, ನಿರ್ವಹಣೆ ಹಾಗೂ ರೈಲು ಸೇವೆಯ ಕಾರ್ಯಾಚರಣೆಗೆ ಕಾನೂನು ರಕ್ಷಣೆಯ ಅವಶ್ಯಕತೆ ಇದೆ ಎಂದು ಸಚಿವರು ಮಸೂದೆಯನ್ನು ಮಂಡಿಸುತ್ತಾ ನುಡಿದರು.

2010ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಚಂಡೀಗಢ, ಹೈದರಾಬಾದ್ ಕೊಚ್ಚಿ ಹಾಗೂ ಮುಂಬೈಯಲ್ಲಿ ವಿವಿಧ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಸೇವೆಗಳಿಗೂ ಕಾನೂನಿ ಹೊದಿಕೆ ನೀಡಲು ಈ ಶಾಸನವು ಸಹಾಯವಾಗಲಿದೆ.

1978ರ ಮೆಟ್ರೋ ರೈಲ್ವೇ(ನಿರ್ಮಾಣ ಕಾಮಗಾರಿ) ಕಾಯ್ದೆ ಹಾಗೂ 2002ರ ದೆಹಲಿ ಮೆಟ್ರೋ ರೈಲ್ವೇ(ಕಾರ್ಯಾಚರಣೆ ಹಾಗೂ ನಿರ್ವಹಣೆ) ಕಾಯ್ದೆಗೆ ಈ ಮಸೂದೆ ಮುಖಾಂತರ ತಿದ್ದುಪಡಿ ತರಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ