ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನಗೆ ಮಟನ್ ಬಿರಿಯಾನಿ ಕೊಡಿ:ಜೈಲಿನಲ್ಲಿ ಕಸಬ್ ಹಠ (Mutton Biryani | Ajmal Kasab | 26/11 terror attack | Ujjwal Nikam)
 
PTI
ವಾಣಿಜ್ಯ ನಗರಿ ಮುಂಬೈ ಮೇಲೆ ದಾಳಿ ನಡೆಸಿ ಸೆರೆಸಿಕ್ಕಿ ಜೈಲುಕಂಬಿ ಎಣಿಸುತ್ತಿರುವ ಉಗ್ರ ಅಮೀರ್ ಅಜ್ಮಲ್ ಕಸಬ್, ತನಗೆ ಬಿರಿಯಾನಿ ಊಟ ನೀಡಬೇಕೆಂದು ಆಗ್ರಹಿಸಿ ಜೈಲಿನಲ್ಲಿ ಪುಂಡಾಟಿಕೆಗೆ ಇಳಿದಿದ್ದಾನೆ.

ಜೈಲಿನ ಅಧಿಕಾರಿಗಳು ಕೊಡುವ ಊಟ ತಿರಸ್ಕರಿಸಿರುವ ಆತ, ಪಾತ್ರೆಗಳನ್ನು ಕಾರಾಗೃಹದ ಗೋಡೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಏತನ್ಮಧ್ಯೆ, ಈ ರೀತಿ ಕೆಟ್ಟದಾಗಿ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಾಧೀಶ ತಾಹಾಲಿಯಾನಿ ಕಸಬ್‌ಗೆ ಎಚ್ಚರಿಕೆ ನೀಡಿದ್ದಾರೆ.

ಮುಂಬೈ ದಾಳಿ ಪ್ರಕರಣದ ವಿಚಾರಣೆ ಗುರುವಾರ ಆರಂಭವಾದಾಗ ಪೊಲೀಸರು ಕಸಬ್‌ನ ವರ್ತನೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ಮಟನ್ ಬಿರಿಯಾನಿಗೆ ಪಟ್ಟು ಹಿಡಿದಿರುವ ಕಸಬ್ ಅದನ್ನು ತಂದು ಕೊಡದ ಕಾರಣ ಪಾತ್ರೆಗಳನ್ನು ಎಸೆಯುತ್ತಿದ್ದಾನೆ ಎಂದು ದೂರಿದರು. ಈ ಹಿಂದೆಯೂ ಇದೇ ರೀತಿ ಮಾಡಿದ್ದ ಎಂದು ಪೊಲೀಸರು ದೂರಿದ್ದರು.

ಬೇರೆ ಕೈದಿಗಳಿಗೆ ನೀಡುತ್ತಿರುವ ಊಟವನ್ನೇ ಅಜ್ಮಲ್ ಕಸಬ್‌ಗೆ ನೀಡುತ್ತಿರುವುದಾಗಿ ಜೈಲಿನ ಅಧಿಕಾರಿ ಕೋರ್ಟ್‌ ಗಮನಕ್ಕೆ ತಂದರು. ಆದರೆ ಈತ ಮಟನ್ ಬಿರಿಯಾನಿಯೇ ಬೇಕೆಂದು ಊಟದ ಪಾತ್ರೆಯನ್ನು ಜೈಲಿನ ಗೋಡೆಗಳಿಗೆ ಎಸೆದು ಆಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ವಿವರಿಸಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ