ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಂದಿಜ್ವರ: ಪುಣೆಯಲ್ಲಿ ಇನ್ನೊಂದು ಪ್ರಕರಣ ಗಂಭೀರ, ವೈದ್ಯರಿಗೂ ಅಂಟಿತು ರೋಗ (Swine flu | Pune | H1N1 | Pardeshi)
 
ಪುಣೆಯ ಸಸ್ಸೂನ್ ಆಸ್ಪತ್ರೆಯಲ್ಲಿ ಎಚ್1ಎನ್1 ಸೋಂಕು ತಗಲಿರುವ 35ರ ಹರೆಯದ ವ್ಯಕ್ತಿಯೊಬ್ಬರು ದಾಖಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಹೃದ್ರೋಗದಿಂದ ಬಳಲುತ್ತಿದ್ದ ಇವರನ್ನು ಹಡಸ್ಪಾರ್ ಎಂಬ ಪ್ರದೇಶದ ಖಾಸಗೀ ಆಸ್ಪತ್ರೆಯೊಂದರಿಂದ ಇಲ್ಲಿಗೆ ಕರೆತರಲಾಗಿದ್ದು ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಕೀಯ ಅಧಿಕಾರಿ ಆರ್.ಆರ್. ಪರ್ದೇಶಿ ಹೇಳಿದ್ದಾರೆ. ರೋಗಿಯ ಸ್ಥಿತಿ ಗಂಭೀರವಾಗಿದ್ದರೂ, ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಪುಣೆಯಲ್ಲಿ ನಾಯ್ಡ ಆಸ್ಪತ್ರೆಯಲ್ಲಿ ಇವರ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು ಬಳಿಕ ನೋಬೆಲ್ ಆಸ್ಪತ್ರೆಗೆ ಅಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಗಿದೆ. ಅವರಿಗೆ ಹಂದಿಜ್ವರದ ಸೋಂಕು ಪತ್ತೆಯಾದ ಕೂಡಲೇ ಅವರನ್ನು ಸಸ್ಸೂನ್ ಜನರಲ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪರ್ದೇಶಿ ಹೇಳಿದ್ದಾರೆ.

ಈ ರೋಗಿಗೆ ರೋಗ ಸಂಪರ್ಕ ಹೇಗಾಯಿತೆಂದು ತಿಳಿದಿಲ್ಲ, ಅವರು ರೋಗವಿದ್ದ ಇತರರ ಸಂಪರ್ಕಕ್ಕೆ ಬಂದಿರುವ ಮಾಹಿತಿ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ವೈದ್ಯರಿಗೇ ಸ್ವೈನ್ ಫ್ಲೂ
ಇನ್ನೊಂದು ಪ್ರಕರಣದಲ್ಲಿ ಖಾಸಗೀ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರೊಬ್ಬರೊಬ್ಬರಿಗೆ ಈ ರೋಗದ ಸೋಂಕು ತಗುಲಿದ್ದು, ಅವರನ್ನೂ ಸಹ ಸಸ್ಸೂನ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ರಕ್ತ ಪರೀಕ್ಷೆಯಿಂದ ಹಂದಿಜ್ವರ ಖಚಿವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್‌ಲಾಕ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ಪ್ರತ್ಯೇಕ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರದಂದು ಭಾರತದಲ್ಲಿ ಈ ಮಹಾಮಾರಿಗೆ ಪುಣೆಯಲ್ಲಿ ಮೊದಲ ಬಲಿಯಾಗಿತ್ತು. 14ರ ಹರೆಯದ ರೀದಾ ಶೇಕ್ ಎಂಬ ಬಾಲಕಿ ಸಾವನ್ನಪ್ಪಿದ್ದಳು. ಆಕೆಯ ಸಾವಿಗೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿರುವ ಹೆತ್ತವರು ಆಕೆಯನ್ನು ದಾಖಲಿಸಲಾಗಿದ್ದ ಎರಡು ಖಾಸಗೀ ಆಸ್ಪತ್ರೆಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ