ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿ: ಇಬ್ಬರು ಶಂಕಿತ ಹಿಜ್ಬುಲ್ಲಾ ಉಗ್ರರ ಬಂಧನ (Hizbul-Mujahideen | Chandni Chowk | Independence Day)
 
ಸ್ವಾತಂತ್ರ್ಯ ದಿನಗಳ ಕೆಲವೇದಿನಗಳ ಮುಂಚಿತವಾಗಿ ದೆಹಲಿಯಲ್ಲಿ ಇಬ್ಬರು ಶಂಕಿತ ಹಿಜ್ಬುಲ್ ಉಗ್ರರರನ್ನು ಪೊಲೀಸರು ಬಂಧಿಸಿದ್ದಾರೆ. ಜಾವೇದ್ ಅಹ್ಮದ್ ಹಾಗೂ ಅಶಿಖ್ ಅಲಿ ಅವರುಗಳನ್ನು ಚಾಂದಿನಿ ಚೌಕ್ ಪ್ರದೇಶದಲ್ಲಿ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಪೊಲೀಸರು ಬಂದಿಸಿದ್ದಾರೆ.

ಎರಡು ಎ.ಕೆ. 47 ರೈಫಲ್‌ಗಳು ಹಾಗೂ ನಾಲ್ಕು ತೋಟಾಗಳು ಮತ್ತು 120 ಸುತ್ತುಗಳ ಮದ್ದುಗುಂಡುಗಳನ್ನು ಬಂಧಿತ ಉಗ್ರರಿಂದ ವಶಪಡಿಸಿಕೊಳ್ಳಲಾಗದೆ. ಸಾಂಟ್ರೋ ಕಾರಿನಲ್ಲಿದ್ದ ಇವರನ್ನು ಬಂಧಿಸಲಾಗಿದ್ದು. ರೈಫಲ್‌ಗಳನ್ನು ಕಾರಿನ ಹಿಂದಿನ ಸೀಟಿನಡಿಯಲ್ಲಿ ಅಡಗಿಸಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 4ರಂದು ಲಷ್ಕರೆ ಸಂಘಟನೆಯ ಮೊಹಮ್ಮದ್ ಒಮರ್ ಮದನಿಯನ್ನು ಕುತುಬ್ ಮಿನಾರ್ ಸಮೀಪ ಬಂಧಿಸಲಾಗಿತ್ತು. ಈತ ಲಷ್ಕರೆ ಸಂಘಟನೆಗೆ ಯುವಕರನ್ನ ನೇಮಿಸುತ್ತಿದ್ದ ಅಲ್ಲದೆ, ಸಂಘಟನೆಗೆ ಹಣಕಾಸು ವ್ಯವಸ್ಥೆ ಮಾಡುತ್ತಿದ್ದನೆನ್ನಲಾಗಿದೆ.

ಬಂಧಿತ ಉಗ್ರರ ನಿಜವಾದ ಸಂಚು ಏನಾಗಿತ್ತು ಎಂಬುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯದಿನಚರಣೆಗೆ ಬೆರಳೆಣಿಕೆ ದಿನಗಳ ಮುಂಚಿತವಾಗಿ ಉಗ್ರರ ಬಂಧನವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಲ್ಲೆಡೆ ಭದ್ರತೆ ಬಿಗಿಗೊಳಿಸಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ