ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಖಾಸಗಿ ಶಾಲೆಗಳಿಗೆ ಶುಲ್ಕ ಹೆಚ್ಚಳದ ಹಕ್ಕಿಲ್ಲ: ಸು.ಕೋ (Pvt schools | Supreme Court | Fee structure | students)
 
ವಿದ್ಯಾರ್ಥಿಗಳಿಗೆ ವಿಧಿಸಲಾಗುವ ಶುಲ್ಕವನ್ನು ಹೆಚ್ಚಿಸಲು ಖಾಸಗಿ ಅನುದಾನಿರಹಿತ ಶಾಲೆಗಳಿಗೆ ಹಕ್ಕಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ ನೀಡಿದೆ.

ಅನುದಾನರಹಿತ ಶಾಲೆಗಳ ಸಮಿತಿಯು 2004ರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಪುನರ್‌ಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ ಸರ್ವೋಚ್ಛ ನ್ಯಾಯಾಲಯ ಈ ತೀರ್ಪು ನೀಡಿದೆ. ಇದರಲ್ಲಿ ಶುಲ್ಕ ಹೆಚ್ಚಳದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಕುರಿತು ಶೈಕ್ಷಣಿಕ ನಿರ್ದೇಶಕರಿಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಎತ್ತಿ ಹಿಡಿದಿತ್ತು.

ಶಿಕ್ಷಕರಿಗೆ ವೇತನ ಆಯೋಗವು ಮಾಡಿರುವ ಶಿಫಾರಸ್ಸನ್ನು ಶಾಲೆಗಳು ಜಾರಿಗೊಳಿಸುವ ಆಧಾರದ ಮೇಲೆ ಶೈಕ್ಷಣಿಕ ನಿರ್ದೇಶಕರು ಶುಲ್ಕ ಹೆಚ್ಚಳದ ನಿರ್ಧಾರ ಮಾಡುತ್ತಾರೆ. ಅನುದಾನ ರಹಿತ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳಕ್ಕೆ ಮುಂಚಿತವಾಗಿ ಶಿಕ್ಷಣ ನಿರ್ದೇಶಕರ ಅನುಮತಿ ಪಡೆಯಬೇಕು ಎಂದು ನ್ಯಾಯಾಲಯ ಹೇಳಿದೆ.

ಆರನೆ ವೇತನ ಆಯೋಗವು ಶಿಕ್ಷಕರಿಗೆ ಹೆಚ್ಚಿನ ಸಂಬಳ ನೀಡುವಂತೆ ಶಿಫಾರಸ್ಸು ಮಾಡುತ್ತದೆ ಎಂಬುದಾಗಿ ಅನುದಾನರಹಿತ ಶಾಲೆಗಳ ಕ್ರಿಯಾ ಸಮಿತಿಯು ತನ್ನ ಮರುವಿಮರ್ಶಾ ಅರ್ಜಿಯಲ್ಲಿ ಹೇಳಿದೆ. ಇದಲ್ಲದೆ, 2004ರ ಸುಪ್ರೀಂ ಕೋರ್ಟ್ ತೀರ್ಪು ದೆಹಲಿ ಶಾಲಾ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಶುಕ್ರವಾರದ ಕೋರ್ಟ್ ತೀರ್ಪು ಶಾಲಾಮಕ್ಕಳ ಹೆತ್ತವರಿಗೆ ಸಂದ ಬಹುದೊಡ್ಡ ಜಯವಾಗಿದೆ. ಖಾಸಗಿ ಶಾಲೆಗಳು ಶುಲ್ಕವನ್ನು ಆಗಾಗ ಹೆಚ್ಚಿಸುವುದನ್ನು ಇವರು ವಿರೋಧಿಸುತ್ತಲೇ ಬಂದಿದ್ದಾರೆ.

2004ರ ತೀರ್ಪಿನಲ್ಲಿ ನ್ಯಾಯಾಲಯವು ಶುಲ್ಕದ ಸ್ವರೂಪವನ್ನು ಸ್ಥಗಿತಗೊಳಿಸುವಂತೆ ಮತ್ತು ಶಾಲೆಗಳು ಮಾತೃ ಸಂಸ್ಥೆಗೆ ಮಾಡುವ ನಿಧಿ ವರ್ಗಾವಣೆಯನ್ನು ನಿಲ್ಲಿಸುವಂತೆ ಶೈಕ್ಷಣಿಕ ನಿರ್ದೇಶಕರಿಗೆ ಅಧಿಕಾರ ನೀಡಿತ್ತು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ