ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿಯಲ್ಲಿ 3 ವೈದ್ಯರಿಗೆ ಹಂದಿಜ್ವರದ ಸೋಂಕು (Swine flu | Pune | New Delhi | Doctors)
 
ದಿನೇದಿನೇ ಹಂದಿಜ್ವರ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ರೋಗಕ್ಕೆ ಬಾಲಕಿಯೊಬ್ಬಳು ಬಲಿಯಾಗಿರುವ ಬೆನ್ನಿಗೇ, ವೈದ್ಯರುಗಳಿಗೇ ಈ ಸೊಂಕು ತಗಲಿರುವುದು ವರದಿಯಾಗಿದೆ. ಪುಣೆಯ ವೈದ್ಯರೊಬ್ಬರಿಗೆ ಈ ಸೋಂಕು ತಗಲಿದೆಯೆಂದು ಸುದ್ದಿಯಾದ ಬಳಿಕ, ದೆಹಲಿಯ ಮೂವರು ವೈದ್ಯರಲ್ಲೂ ಎಚ್1ಎನ್1 ಪತ್ತೆಯಾಗಿದೆ.

ಇತ್ತ ಕರ್ನಾಟಕದಲ್ಲೂ ಈ ರೋಗ ತಗಲುಲಿರುವವರ ಸಂಖ್ಯೆ ಹೆಚ್ಚಿದ್ದು ಮಂಗಳೂರೊಂದರಲ್ಲೇ ಒಂಬತ್ತು ಪ್ರಕರಣಗಳು ಬೆಳಕಿಗೆ ಬಂದಿದೆ. ವೈದ್ಯರಿಗೆ ರೋಗದ ಸೋಂಕು ತಗುಲಿರುವುದರಿಂದ ಆಸ್ಪತ್ರೆಗಳು ಹೆಚ್ಚಿನ ಜಾಗರೂಕತೆ ವಹಿಸುತ್ತಿದ್ದು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ವಹಿಸುವಂತೆ ಮಾಡಿದೆ.

ಇದೀಗ ದೆಹಲಿಯಲ್ಲಿ ಗೇಟ್ ಕೀಪರ್‌ಗಳು, ಭದ್ರತಾ ಸಿಬ್ಬಂದಿಗಳು, ವೈದ್ಯರು, ಇತರ ಸಿಬ್ಬಂದಿಗಳು ಹಾಗೂ ಇಲ್ಲಿಗೆ ಭೇಟಿ ನೀಡುತ್ತಿರುವ ಮಾಧ್ಯಮಗಳವರೂ ಸರ್ಜಿಕಲ್ ಮಾಸ್ಕ್‌ಗಳನ್ನು ಧರಿಸುತ್ತಿದ್ದಾರೆ. ಗರ್ಭಿಣಿಯರಿಂದ ಹಿಡಿದು ವಿದ್ಯಾರ್ಥಿಗಳ ತನಕ ನೂರಾರು ಮಂದಿ ಸ್ವೈನ್ ಫ್ಲೂ ತಪಾಸಣೆಗಾಗಿ ಇಲ್ಲಿಗೆ ಆಗಮಿಸುತ್ತಿರುವ ಕಾರಣ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ.

ದೆಹಲಿ ಮಾತ್ರವಲ್ಲದೆ ಪಕ್ಕದ ಸೆಟಲೈಟ್ ಪಟ್ಟಣಗಳಾದ ನೋಯ್ಡಾ, ಗುರ್ಗಾಂವ್, ಫರಿದಾಬಾದ್‌ಗಳಿಂದ ಭಯಭೀತ ಜನತೆ ಸೋಂಕು ಪತ್ತೆ ಪರೀಕ್ಷೆಗಾಗಿ ಹರಿದು ಬರುತ್ತಿದ್ದಾರೆ.

ಹಂದಿಜ್ವರ: ಪುಣೆಯಲ್ಲಿ ಇನ್ನೊಂದು ಪ್ರಕರಣ ಗಂಭೀರ, ವೈದ್ಯರಿಗೂ ಅಂಟಿತು ರೋಗ
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ