ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೂರ್ಣಾವಧಿಗೆ ನಾನೇ ವಿಪಕ್ಷ ನಾಯಕ: ಆಡ್ವಾಣಿ (BJP | Advani | UPA | RSS | Sushma swaraj)
 
PTI
ಪ್ರತಿಪಕ್ಷ ನಾಯಕರಾಗಿ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ತಾತ್ಕಾಲಿಕವಾಗಿ ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ವದಂತಿಗಳನ್ನು ಖುದ್ದು ಆಡ್ವಾಣಿಯವರೇ ತಳ್ಳಿಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಏತನ್ಮಧ್ಯೆ ಆಡ್ವಾಣಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಪೂರ್ಣಾವಧಿಗೆ ನೇಮಕ ಮಾಡಲಾಗಿದೆ ಎಂದು ಭಾರತೀಯ ಜನತಾಪಕ್ಷ ಸ್ಪಷ್ಟಪಡಿಸಿದೆ.

ಲೋಕಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಹುದ್ದೆಗೆ ಏರಲು ಆಡ್ವಾಣಿ ಆರಂಭದಲ್ಲಿ ಹಿಂದೇಟು ಹಾಕಿದ್ದರು. ಉಪ ನಾಯಕರಾಗಿ ಸುಷ್ಮಾ ಸ್ವರಾಜ್ ಅವರನ್ನು ನೇಮಕ ಮಾಡಿದಾಗ ಆಡ್ವಾಣಿ ಸದ್ಯದಲ್ಲೇ ವಿಪಕ್ಷ ನಾಯಕನ ಹುದ್ದೆ ತ್ಯಜಿಸಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

ಪ್ರತಿಪಕ್ಷ ಉಪನಾಯಕಿಯಾಗಿ ನನಗಿರುವ ಅಧಿಕಾರದ ಮೇಲೆ ಹೇಳುತ್ತೇನೆ. ಆಡ್ವಾಣಿ ಅವರ ಅವಧಿಗೆ ಗಡುವಿಲ್ಲ ಎಂದು ಸುಷ್ಮಾ ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು. ಜತೆಯಲ್ಲೇ ಇದ್ದ ಆಡ್ವಾಣಿ ಇದನ್ನು ದೃಢೀಕರಿಸಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ