ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸದರ ವರ್ತನೆಗೆ ಮೂಗುದಾರ ಅಗತ್ಯ: ಸ್ಪೀಕರ್ ಮೀರಾ (Meera kumar | Parliment | UPA | Congress | BJP)
 
PTI
ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ ಸಂಸತ್ ಕಲಾಪಗಳಿಗೆ ಪದೇ ಪದೇ ಭಂಗವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸ್ಪೀಕರ್ ಮೀರಾ ಕುಮಾರ್, ಸಂಸದರ ನಡವಳಿಕೆಯನ್ನು ನಿಯಂತ್ರಣಕ್ಕೆ ಒಳಪಡಿಸುವ ಅಗತ್ಯವಿದೆ ಎಂದರು.

ನಮ್ಮ ರಾಷ್ಟ್ರವೂ ಒಳಗೊಂಡಂತೆ ಪ್ರಪಂಚದ ಹಲವಾರು ರಾಷ್ಟ್ರಗಳ ಸಂಸತ್ತುಗಳು ಈ ಸಮಸ್ಯೆಗೆ ಸಿಲುಕಿವೆ. ಕಾನೂನು ನಿರೂಪಕರ ನಡವಳಿಕೆ ಮೇಲೆ ಹತೋಟಿ ಸಾಧಿಸುವ ಜರೂರು ಇದೆ ಎಂದು ಮಹಿಳಾ ಮೀಸಲಾತಿ ಕುರಿತು ನಡೆದ ಚರ್ಚೆ ವೇಳೆ ಹೇಳಿದರು.

ಸಂಸದರ ವರ್ತನೆಗೆ ಕಡಿವಾಣ ಹಾಕಲು ನಮ್ಮ ಪುಸ್ತಕದಲ್ಲಿ ಕಠಿಣವಾದ ಕಾನೂನುಗಳೇ ಇವೆ. ಆದರೆ, ವಾಸ್ತವದಲ್ಲಿ ಆ ಕಾನೂನುಗಳ ಪಾಲನೆ ಮಾತ್ರ ಆಗುತ್ತಿಲ್ಲ ಎಂದ ಅವರು ಈ ಸಂಬಂಧ ಸದಸ್ಯರೊಬ್ಬರು ಪ್ರಸ್ತಾಪ ಮಾಡಿರುವ ಖಾಸಗಿ ನಿರ್ಣಯದ ಸಲಹೆಗಳನ್ನು ಪರಿಗಣಿಸಬಹುದು ಎಂದರು.

ಕಾಂಗ್ರೆಸ್‌ನ ಎಲ್.ರಾಜಗೋಪಾಲ್ ಅವರು ಖಾಸಗಿ ನಿರ್ಣಯ ಮಂಡಿಸಿ, ಯಾವುದೇ ಸದಸ್ಯ ಅಥವಾ ಸದಸ್ಯರ ಗುಂಪು ಅಧಿವೇಶನದ ಅವಧಿಯೊಂದರಲ್ಲಿ 3ಬಾರಿ ಕಲಾಪಕ್ಕೆ ತೊಂದರೆ ಉಂಟು ಮಾಡಿದರೆ ಅಂಥವರ ಸದಸ್ಯತ್ವ ರದ್ದತಿ ಬಗ್ಗೆ ಸದನ ನಿರ್ಣಯ ಕೈಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ