ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒತ್ತಡದಲ್ಲಿ ನೀಡಿದ ತಲಾಖ್ ವಿಚ್ಛೇದನವಲ್ಲ: ಶರಿಯ ಕೋರ್ಟ್ (Talaq | Islam | Shariat | Divorce)
 
ಮುಜಾಫರಾನಗರ: ಒತ್ತಡದಲ್ಲಿ ನೀಡಿದ ತಲಾಖ್ ನಿಜವಾದ ವಿಚ್ಛೇದನ ಆಗುವುದಿಲ್ಲ ಎಂದು ಇಲ್ಲಿನ ಶರಿಯತ್ ನ್ಯಾಯಾಲಯ ಒಂದು ಹೇಳಿದೆ.

ಹದಿನೈದು ವರ್ಷ ಹಳೆಯದಾದ ವಿಚ್ಛೇದನ ಪ್ರಕರಣ ಒಂದನ್ನು ವಿಚಾರಿಸುವ ವೇಳೆಗೆ ನ್ಯಾಯಾಲಯ ಈ ಅಭಿಪ್ರಾಯಕ್ಕೆ ಬಂದಿದೆ. ಈ ಪ್ರಕರಣದಲ್ಲಿ ಅರ್ಜಿದಾರರು, ತನ್ನ ಪತ್ನಿಯ ಕುಟುಂಬಿಕರು ಒತ್ತಾಯ ಪೂರ್ವಕವಾಗಿ ತನ್ನಿಂದ ತಲಾಖ್ ಹೇಳಿಸಿದ್ದಾರೆ ಎಂದು ಹೇಳಿದ್ದರು.

ಅಲಿಘರ್ ನಿವಾಸಿ(45)ಯಾಗಿರುವ ಶಫಿಕುಲ್ಲಾ ಅವರು ಅವರು ತನ್ನ 42ರ ಹರೆಯದ ಪತ್ನಿ ಫರಾಳೊಂದಿಗೆ ಮತ್ತೆ ಸೇರಿಸಬೇಕು ಎಂದು ಶರಿಯತ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅವರ ಪತ್ನಿ ಕಳೆದ 15 ವರ್ಷಗಳಿಂದ ತನ್ನ ಹೆತ್ತವರೊಂದಿಗೆ ಜೀವಿಸುತ್ತಿದ್ದಾರೆ.

ವಿವಾಹವಾದ ಎರಡೇ ವರ್ಷದಲ್ಲಿ ಪತ್ನಿಯ ಹೆತ್ತವರು ತನ್ನಿಂದ ಪತ್ನಿಯನ್ನು ಒತ್ತಾಯಪೂರ್ವಕವಾಗಿ ಬೇರ್ಪಡಿಸಿದರಲ್ಲದೆ, ಬಲಾತ್ಕಾರವಾಗಿ ತಲಾಖ್‌ನಾಮಗೆ ಸಹಿ ಪಡೆದುಕೊಂಡರೆಂದು ದೂರಿದ್ದಾರೆ.

ಪತಿ ಹಾಗೂ ಪತ್ನಿಯರಿಬ್ಬರನ್ನೂ ವಿಚಾರಣೆ ನಡೆಸಿದ ಶರಿಯತ್ ಕೋರ್ಟ್, ಒತ್ತಡದಿಂದ ನೀಡಿದ ತಲಾಖ್ ಸಿಂಧುವಲ್ಲ ಮತ್ತು ಈ ಇಬ್ಬರು ಮತ್ತೆ ಒಟ್ಟಾಗಿ ಜೀವಿಸಬಹುದು ಎಂಬ ತೀರ್ಪು ನೀಡಿತು.

ಅವರ ಪುತ್ರನಿಗೆ 16 ವರ್ಷ ತುಂಬಿದ್ದು, ಆತ ತನ್ನ ಹೆತ್ತವರು ಮತ್ತೆ ಒಂದಾಗಬೇಕು ಎಂದು ಇಚ್ಛಿಸುತ್ತಾನೆ ಎಂದು ದಂಪತಿಗಳು ನ್ಯಾಯಾಲಯದ ಮುಂದೆ ನಿವೇದಿಸಿಕೊಂಡರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ