ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬರದಿಂದಾಗಿ ಯಾವುದೇ ಪ್ರಜೆ ಹಸಿವಿನಿಂದಿರಬಾರದು: ಪ್ರಧಾನಿ (Prime Minister | Manmohan Singh | Drought | Foodgrain)
 
ಸಾಕಷ್ಟು ಮಳೆ ಸುರಿಯದಿರುವುದು ಹಾಗೂ ವಿಳಂಬಿತ ಮಳೆಯಿಂದಾಗಿ ರಾಷ್ಟ್ರವು ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದೆ ಎಂದು ಹೇಳಿರುವ ಪ್ರಧಾನಿ ಮನಮೋಹನ್ ಸಿಂಗ್, ಕೇಂದ್ರವು ಸಾಕಷ್ಟು ಆಹಾರಧಾನ್ಯವನ್ನು ಹೊಂದಿದೆ ಹಾಗೂ ಈ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ ಅಲ್ಲದೆ, ಅವಶ್ಯಕತೆ ಉಂಟಾದಲ್ಲಿ ಮಾರುಟ್ಟೆಯಲ್ಲಿ ಮಧ್ಯಪ್ರವೇಶ ಮಾಡುವುದಾಗಿ ಹೇಳಿದ್ದಾರೆ.

"ಕೃಷಿ ಕಾರ್ಯಾಚರಣೆಗಳಿಗೆ ರಾಷ್ಟ್ರದ ಹಲವು ಭಾಗಗಳಿಗೆ ಪರಿಣಾಮ ಉಂಟಾಗಿದ್ದು, ರೈತರು ಸಂಕಷ್ಟಕ್ಕೆ ಬಿದ್ದಿದ್ದಾರೆ, ಆರು ಮಿಲಿಯನ್ ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶದಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಭತ್ತದ ಉತ್ಪಾದನೆಗೆ ಅತಿಹೆಚ್ಚು ಪರಿಣಾಮ ಬೀರಿದೆ ಎಂದು ಅವರು ಮುಖ್ಯಕಾರ್ಯದರ್ಶಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕಳೆದೆರಡು ವರ್ಷಗಳಲ್ಲಿ ಉತ್ತಮ ಬೆಳೆಯಾಗಿರುವ ಕಾರಣ ನಮ್ಮ ಬಳಿ ಆಹಾರಧಾನ್ಯಗಳ ದಾಸ್ತಾನಿದೆ ಎಂದು ಸಿಂಗ್ ನುಡಿದರು.

"ಬರಪೀಡಿತ ಪ್ರದೇಶಗಳಿಗೆ ಸಾಕಾಗುವಷ್ಟು ಆಹಾರಧಾನ್ಯಗಳು ನಮ್ಮ ಬಳಿ ಇವೆ. ನಾವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯವುದಿಲ್ಲ ಹಾಗೂ ಅವಶ್ಯಕತೆ ಬಿದ್ದರೆ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಲು ಹಿಂಜರಿಯುವುದಿಲ್ಲ" ಎಂದು ಪ್ರಧಾನಿ ಸಿಂಗ್ ಕೃಷಿ ಸಚಿವ ಶರದ್ ಪವಾರ್ ಉಪಸ್ಥಿತಿಯಲ್ಲಿ ನುಡಿದರು.

ಭಾರತೀಯ ಆಹಾರ ನಿಗಮದಲ್ಲಿ ಆಹಾರಧಾನ್ಯಗಳು ಕೊಳೆಯುತ್ತಿವೆ ಎಂದು ಪವಾರ್ ನುಡಿದರು.

ಈ ಕುರಿತು ಕ್ಷಿಪ್ರ, ರಚನಾತ್ಮಕ ಹಾಗೂ ಪರಿಣಾಮಕಾರಿ ಕಾರ್ಯಕೈಗೊಳ್ಳುವಂತೆ ಒತ್ತಾಯಿಸಿದ ಅವರು "ರಾಜ್ಯಗಳಿಗೆ ಯಾವುದಾದರೂ ಹೆಚ್ಚುವರಿ ಸಹಾಯದ ಅವಶ್ಯಕತೆ ಇದ್ದರೆ ಕೇಂದ್ರವು ಅದನ್ನು ನೀಡಲಿದೆ. ಯಾವುದೇ ಸಂದರ್ಭದಲ್ಲೂ ಪ್ರಜೆಗಳು ಹಸಿವಿನಿಂದಿರಲು ಸರ್ಕಾರ ಅವಕಾಶ ನೀಡುವುದಿಲ್ಲ" ಎಂದು ಪ್ರಧಾನಿ ಹೇಳಿದರು.

ಪ್ರಸಕ್ತ ವರ್ಷದಲ್ಲಿ ಖಾರಿಫ್ ಬೆಳೆಯ ಉತ್ಪನ್ನದಲ್ಲಿನ ಕೊರತೆಯು ಮುಂದಿನ ತಿಂಗಳಲ್ಲಿ ಆಹಾರವಸ್ತುಗಳ ಮೇಲೆ ಹಣದುಬ್ಬರದ ಪರಿಣಾಮ ಬೀರಬಹುದು ಎಂದು ಹೇಳಿದ ಅವರು ರಾಜ್ಯ ಮತ್ತು ಕೇಂದ್ರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಹಾಗೂ ಸಾರ್ವದನಿಕ ವಿತರಣಾ ಪದ್ಧತಿಯನ್ನು ಸಕ್ರಿಯಗೊಳಿಸಬೇಕು ಎಂದು ನುಡಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ