ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಸಿಎಂಗಳ ಜತೆ ಚರ್ಚಿಸಲಿ: ರಾಜ್‌ನಾಥ್ (BJP | Rajnath Singh | UPA | government)
 
ರಾಷ್ಟ್ರದಲ್ಲಿನ ಬರದಂತಹ ಪರಿಸ್ಥಿತಿಯ ವಿರುದ್ಧ ಹೋರಾಡುವ ಹೊಣೆಯನ್ನು ಯುಪಿಎ ಸರ್ಕಾರವು ರಾಜ್ಯಗಳ ಮೇಲೆ ಹಾಕಬಾರದು, ಯಾಕೆಂದರೆ, ರಾಜ್ಯಗಳು ಸೀಮಿತವಾದ ಸಂಪನ್ಮೂಲವನ್ನು ಹೊಂದಿರುತ್ತವೆ ಎಂದು ಬಿಜೆಪಿ ಅಧ್ಯಕ್ಷ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

"ರಾಜ್ಯಸರ್ಕಾರಗಳ ಸಂಪನ್ಮೂಲಗಳು ಸೀಮಿತವಾದುದು ಎಂಬುದು ಪ್ರಧಾನಿಯವರಿಗೆ ತಿಳಿದಿದೆ. ತಮ್ಮ ರಾಜ್ಯದಲ್ಲಿ ಬರದಂತಹ ಪರಿಸ್ಥಿತಿ ಇದ್ದು ನಮಗೆ ಸಹಾಯ ಬೇಕು ಎಂಬುದಾಗಿ ಹಲವು ರಾಜ್ಯಸರ್ಕಾರಗಳು ಕೇಂದ್ರಕ್ಕೆ ವರದಿ ಕಳುಹಿಸಿವೆ. ಈ ಕುರಿತು ಪ್ರಧಾನಿಯವರು ಮುಖ್ಯಮಂತ್ರಿಗಳ ಜತೆಗೂ ಮಾತನಾಡಬೇಕು" ಎಂದು ಹೇಳಿದ್ದಾರೆ. ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಬೆಲೆ ನಿಯಂತ್ರಣಕ್ಕೆ ವಿಫಲವಾಗಿರುವ ಯುಪಿಎ ಸರ್ಕಾರದ ವಿರುದ್ಧ ಬಿಜೆಪಿಯು ಆಗಸ್ಟ್ 17ರಂದು ರಾಷ್ಚ್ರಾದ್ಯಂತ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಿದೆ ಎಂದು ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

ಐದು ವರ್ಷದ ಮೊದಲ ಅವಧಿಯಲ್ಲೇ ತನಗೆ ಆರ್ಥಿಕತೆಯ ಮೇಲೆ ದೃಢವಾದ ಹಿಡಿತ ಇಲ್ಲ ಎಂಬುದನ್ನು ಯುಪಿಎ ತೋರಿಸಿದೆ ಎಂದು ಸಿಂಗ್ ಹೇಳಿದ್ದಾರೆ.

ಅವರು ಈ ಸರ್ಕಾರವನ್ನು ರೂಪಿಸುವ ವೇಳೆಗೆ ನೂರು ದಿನಗಳೊಳಗಾಗಿ ಬೆಲೆ ನಿಯಂತ್ರಿಸುವುದಾಗಿ ಹೇಳಿದ್ದರು. ಆದರೆ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿದೆ" ಎಂದು ಅವರು ದೂರಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ