ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ವೈನ್ ಫ್ಲೂಗೆ ಮುಂಬೈನಲ್ಲಿ ಮತ್ತೊಂದು ಬಲಿ? (swine flu | Mumbai | Fahima Panwala | Lilavati Hospital)
 
ಎಚ್1ಎನ್1 ಸೋಂಕು ಪತ್ತೆಯಾಗಿದ್ದ ಮಹಿಳೆಯೊಬ್ಬರು ಮುಂಬೈನ ಆಸ್ಪತ್ರೆಯೊಂದರಲ್ಲಿ ಶನಿವಾರ ಸಾವನ್ನಪ್ಪಿದ್ದಾರೆ.

ಪಾಹಿಮಾ ಪಾನ್ವಾಲ ಎಂಬ ಹೆಸರಿನ 53ರ ಹರೆಯದ ಮಹಿಳೆಯ ಸ್ವೈನ್ ಫ್ಲೂವಿನಿಂದಲೇ ಸತ್ತಿದ್ದಾರೆ ಎಂಬುದನ್ನು ದೃಢಪಡಿಸದ ಮುನಿಸಿಪಲ್ ಆಯುಕ್ತ ಜೈರಾಜ್ ಪಾಟಕ್ ಅವರು ಸಾವಿಗೆ ಕಾರಣ ಇನ್ನಷ್ಟೆ ಪತ್ತೆಯಾಗಬೇಕಿದೆ ಎಂದು ಹೇಳಿದ್ದಾರೆ.

ಒಂದೊಮ್ಮೆ ಅವರು ಎಚ್1ಎನ್1 ಸೋಂಕಿನಿಂದಲೇ ಸಾವನ್ನಪ್ಪಿದರೆ ಇದು ಈ ರೋಗಕ್ಕೆ ತುತ್ತಾಗುತ್ತಿರುವ ಎರಡನೆ ಬಲಿಯಾಗುತ್ತದೆ.

ಇವರಿಗೆ ಲೀಲಾವತಿ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನ್ಯುಮೋನಿಯಾ ಹಾಗೂ ಹೈಪರ್‌ಟೆನ್ಶನ್‌ಗಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಮುಂಜಾನೆ ಅವರನ್ನು ಕಸ್ತೂರ್‌‍ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ರಕ್ತ ತಪಾಸಣೆ ನಡೆಸಿದ ಬಳಿಕ ಅವರಿಗೆ ಸೋಂಕು ತಗಲಿರುವುದು ಪತ್ತೆಯಾಗಿತ್ತು. ಅವರು ಸಾಯಂಕಾಲ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೆಲವೇ ದಿನಗಳ ಹಿಂದೆ 14ರ ಹರೆಯ ಬಾಲಕಿಯೊಬ್ಬಳು ಹಂದಿಜ್ವರದಿಂದಾಗಿ ಸಾವನ್ನಪ್ಪಿದ್ದಳು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ