ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಧ್ರಪ್ರದೇಶ ಮಹಿಳೆಯರಿಗೆ ಸುರಕ್ಷಿತವಲ್ಲ: ವರದಿ (NCRB | Andhra Pradesh | women | IT firms)
 
ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಲ್ಲಿ ಆಂಧ್ರಪ್ರದೇಶಕ್ಕೆ ರಾಷ್ಟ್ರದಲ್ಲೇ ಒಂದನೇ ಸ್ಥಾನ ಲಭಿಸಿದೆ. ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ(ಎನ್‌ಸಿಆರ್‌ಬಿ)ದ ಅಂಕಿ ಅಂಶಗಳು ರಾಜ್ಯಕ್ಕೆ ನಂಬರ್ ವನ್ ಪಟ್ಟ ನೀಡಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಸರಣಿ ಆಸಿಡ್ ದಾಳಿಗಳಿಂದಾಗಿ ರಾಜ್ಯವು ಸುದ್ದಿಯಲ್ಲಿದೆ. ಈ ಮಧ್ಯೆ, ಸರ್ಕಾರಿ ಕಚೇರಿಗಳು ಮತ್ತು ಐಟಿ ಕಚೇರಿಗಳಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗ ಹೇಳಿದೆ.

ಕಳೆದ ನಾಲ್ಕು ತಿಂಗಳಲ್ಲಿ ಆಯೋಗದಲ್ಲಿ ದಾಖಲಾಗಿರುವ 28 ಲೈಂಗಿಕ ಪೀಡನೆ ಪ್ರಕರಣಗಳಲ್ಲಿ ಹೆಚ್ಚಿನವು ಕೆಲಸದ ಸ್ಥಳದಲ್ಲಿ ನಡೆದವು. ಅದರಲ್ಲೂ, ಹೆಚ್ಚಾಗಿ ಸರ್ಕಾರಿ ಕಚೇರಿಗಳಲ್ಲಿ ಈ ದುಷ್ಕೃತ್ಯಗಳು ನಡೆಯುತ್ತಿವೆ. ಈ ಸಂಖ್ಯೆಯು ಮಾರ್ಚ್ 1ರಿಂದ ಜುಲೈ 31ರ ತನಕ ದಾಖಲಾಗಿರುವ ಸಂಖ್ಯೆಗಳಾಗಿವೆ. ಜನವರಿಯಿಂದ ಜುಲೈ 31ರ ತನಕ 17 ಆಸಿಡ್ ಪ್ರಕರಣಗಳು ದಾಖಲಾಗಿವೆ.

ಆಸಿಡ್ ದಾಳಿಗೆ ಸಂಬಂಧಿಸಿದಂತೆ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡುವಂತಹ ವಿಶೇಷ ಕಾನೂನನ್ನು ಜಾರಿಗೆ ತರಲು ರಾಜ್ಯವು ಚಿಂತಿಸುತ್ತಿದೆ. ಆದರೆ ಪ್ರಸಕ್ತ ಜಾರಿಯಲ್ಲಿರುವ ಲೈಂಗಿಕ ದೌರ್ಜನ್ಯ ಹಾಗೂ ವರದಕ್ಷಿಣೆ ವಿರೋಧಿ ಕಾನೂನುಗಳು ನಿರ್ಲಕ್ಷಿಸುವಂತಹುದಲ್ಲ.

2007-2008ರ ಅವಧಿಗೆ ರಾಜ್ಯದಲ್ಲಿ ಒಟ್ಟು 24,738 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 613 ವರದಕ್ಷಿಣೆ ಸಾವು ಪ್ರಕರಣಗಳು, 1,070 ಅತ್ಯಾಚಾರ ಪ್ರಕರಣಗಳು. ಹೈದರಾಬಾದ್ ನಗರ ಒಂದರಲ್ಲೇ 1,932 ಪ್ರಕರಣಗಳು ದಾಖಲಾಗಿದ್ದು, ಇದು ಮಹಿಳೆಯರಿಗೆ ದೆಹಲಿಯ ನಂತರದ ಅತ್ಯಂತ ಅಸುರಕ್ಷಿತ ಸ್ಥಳವಾಗಿದೆ. 2008-09ರಲ್ಲಿ ರಾಜ್ಯದಲ್ಲಿ 930 ಅತ್ಯಾಚಾರ ಪ್ರಕರಣಗಳು, 345 ವರದಕ್ಷಿಣೆ ಪ್ರಕರಣಗಳು ದಾಖಲಾಗಿದ್ದರೆ, ವಾರ್ಷಿಕವಾಗಿ ಸುಮಾರು 12 ಸಾವಿರದಷ್ಟು ಗೃಹ ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ ಎಂದು ವರದಿ ಹೇಳಿದೆ.

ಹೈದರಾಬಾದಿನ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಏಜೆನ್ಸಿಯ ಯೋಜನಾ ನಿರ್ದೇಶಕಿ ಯಾಗಿರುವ ಕೆ. ರಾಜಲಕ್ಷ್ಮಿ ಅವರು ಮದ್ಯಪಾನ ಹಾಗೂ ತೆಲುಗು ಸಿನಿಮಾಗಳಲ್ಲಿ ಮಹಿಳೆಯರನ್ನು ತೋರಿಸುವ ರೀತಿ ಈ ಸಮಸ್ಯೆಗೆ ಕಾರಣ ಎಂದು ಅಭಿಪ್ರಾಯಿಸುತ್ತಾರೆ. "ದಿನವೊಂದರ ಸರಾಸರಿ ಕನಿಷ್ಠ ಮೂರು ಪ್ರಕರಣಗಳನ್ನು ನಾವು ದಿನನಿತ್ಯ ಪಡೆಯುತ್ತೇವೆ. ಮದ್ಯಪಾನ ಹಾಗೂ ವರದಕ್ಷಿಣೆ ಬೇಡಿಕೆಯು ಗೃಹ ಹಿಂಸೆಗೆ ದಾರಿಯಾಗುತ್ತಿದ್ದು, ಇದರಿಂದಾಗಿ ಮಹಿಳೆಯರು ದೌರ್ಜನ್ಯ ಹಾಗೂ ಹಿಂಸೆಗೀಡಾಗುತ್ತಾರೆ" ಎಂದು ಅವರು ಹೇಳುತ್ತಾರೆ.

ಗೃಹಹಿಂಸೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪಹರಣ, ಆಸಿಡ್ ದಾಳಿಗಳು ಸೇರಿದಂತೆ ಮಹಿಳಾ ಆಯೋಗದಲ್ಲಿ ವರ್ಷವೊಂದರ ಸುಮಾರು ಸಾವಿರ ಪ್ರಕರಣಗಳು ದಾಖಲಾಗುತ್ತವೆ.

ಇವೆಲ್ಲವುಗಳಿಗೆ ಮುಕುಟವಿಟ್ಟಂತೆ, 2007ರ ಸೆಪ್ಟೆಂಬರ್ ತಿಂಗಳಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಮೇರಿ ರವೀಂದ್ರನಾಥ್ ಮಹಿಳೆಯೊಬ್ಬರಿಂದ 50,000 ರೂಪಾಯಿ ಲಂಚ ಕೇಳುತ್ತಿದ್ದಾಗಲೇ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ