ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಿದಾ: ತನ್ನ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಅಜಾದ್ (Ghulam Nabi Azad | H1N1 | Reeda Shaikh | Pune)
 
ಎಚ್1ಎನ್1 ವೈರಸ್ ಸೋಂಕಿಗೆ ರಾಷ್ಟ್ರದಲ್ಲಿ ಮೊದಲ ಬಲಿಯಾಗಿರುವ ರಿದಾಶೇಕ್ ಆಸ್ಪತ್ರೆಯಿಂದ ಆಸ್ಪತ್ರೆಗೆ ತೆರಳುವ ವೇಳೆಗೆ ಕನಿಷ್ಠ 80 ಮಂದಿಗೆ ಈ ಸೋಂಕು ತಗುಲಿರಬಹುದು ಎಂಬ ಹೇಳಿಕೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್, ತನ್ನ ಹೇಳಿಕೆಯು ಆಕೆಯ ಕುಟುಂಬವನ್ನು ನೋಯಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ರೋಗ ಹೇಗೆ ಹರಡುತ್ತದೆ ಎಂಬದಕ್ಕೆ ತಾನು ಆಕೆಗೆ ಸೂಕ್ತ ಚಿಕಿತ್ಸೆ ದೊರಕಿಸಿಕೊಡಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಇತರ 80 ಮಂದಿಗೆ ಸೋಂಕು ಹಬ್ಬಿರಬಹುದು" ಎಂದು ಹೇಳಿದ್ದಾಗಿ ಅಜಾದ್ ಹೇಳಿದ್ದಾರೆ.

"ರಿದಾ ಶೇಖ್ ಕುಟುಂಬಕ್ಕೆ ನೋವುಂಟುಮಾಡುವುದು ತನ್ನ ಉದ್ದೇಶವಾಗಿರಲಿಲ್ಲ. ರಿದಾ ಉದ್ದೇಶಪೂರ್ವಕವಾಗಿ ವೈರಸ್ ಹಬ್ಬಿಸಿದ್ದಾಳೆ ಎಂದು ತಾನು ಹೇಳಿಲ್ಲ. ತನಗೆ ಎಚ್1ಎನ್1 ಸೋಂಕು ತಗುಲಿದೆ ಎಂಬ ಅರಿವಿಲ್ಲದೆ ಆಕೆ ಆಸ್ಪತ್ರೆಯಿಂದ ಆಸ್ಪತ್ರೆಗೆ ತೆರಳುವ ವೇಳೆಗೆ ಆಕೆಯ ನಿಕಟ ಸಂಪರ್ಕಕ್ಕೆ ಬಂದಿರುವವರಿಗೆ ಸೋಂಕು ತಗುಲಿರುವ ಅಪಾಯವಿದೆ" ಎಂದು ಹೇಳಿದ್ದೆ ಎಂದು ಅವರು ಹೇಳಿದ್ದಾರೆ.

ಆದರೆ, ಸಚಿವರ ಹೇಳಿಕೆಯು ರಿದಾ ಕುಟುಂಬಿಕರನ್ನು ರೊಚ್ಚಿಗೆಬ್ಬಿಸಿದ್ದು, ಸಚಿವರು ತನ್ನ ಬೇಜವಾಬ್ದಾರಿ ಹೇಳಿಕೆಗೆ ಕ್ಷಮೆಯಾಚಿಸಬೇಕು ಅಥವಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. "ಸರ್ಕಾರ ಕ್ಷಮೆ ಯಾಚಿಸಬೇಕು. ಅಜಾದ್ ಮಗುವನ್ನು ಕಳೆದುಕೊಂಡಿರುವ ಒಬ್ಬ ತಾಯಿಯನ್ನು ನೋಯಿಸಿದ್ದಾರೆ. ನಮ್ಮ ಮಗುವು ಇತರ 80 ಮಂದಿಗೆ ಸೋಂಕು ತಗುಲಿಸಿದ್ದಾಳೆ ಎಂದು ಅವರು ಹೇಳಿದ್ದಾರೆ. ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕು" ಎಂದು ರೀದಾಳ ತಾಯಿ ಹೇಳಿದ್ದಾರೆ.

"ನಮ್ಮ ಮಗುವು ರಾಷ್ಟ್ರಾಕ್ಕಾಗಿ ತನ್ನ ಪ್ರಾಣತ್ಯಾಗ ಮಾಡಿದ್ದಾಳೆ. ಅವಳ ಸಾವಿನಿಂದಾಗಿ ಹಲವಾರು ಮಂದಿ ಸ್ವೈನ್ ಫ್ಲೂ ಪರೀಕ್ಷೆ ಮಾಡಿಸಿಕೊಂಡಿದ್ದು, ಸೋಂಕು ತಗುಲಿರುವುದು ಪತ್ತೆಯಾಗಿದೆ. ಅಜಾದ್ ಒಂದೋ ಕ್ಷಮೆಯಾಚಿಸಬೇಕು ಇಲ್ಲವೇ ರಾಜೀನಾಮೆ ನೀಡಬೇಕು" ಎಂದು ರಿದಾಳ ಚಿಕ್ಕಮ್ಮ ಆಯೇಶಾ ಶೇಖ್ ಹೇಳಿದ್ದರು.

ಸೂಕ್ತಸಮಯಕ್ಕೆ ತಪಾಸಣೆಗೊಳಗಾಗುವುದು ಪ್ರಾಮುಖ್ಯವಾಗಿದೆ. ಇದುವರೆಗೆ ಸಂಭವಿಸಿದ ಸಾವು ಪ್ರಕರಣಗಳಲ್ಲಿ ಸೂಕ್ತ ಸಮಯದಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ರೀದಾಳ ರಕ್ತದ ಮಾದರಿಯನ್ನು ಮುಂಚಿತವಾಗಿಯೇ ತಪಾಸಣೆಗೆ ಕಳುಹಿಸುತ್ತಿದ್ದರೆ ಆಕೆ ಬದುಕುತ್ತಿದ್ದಳು" ಎಂದು ಅಜಾದ್ ಹೇಳಿದ್ದಾರೆ.

ರಿದಾ ಭೇಟಿನೀಡಿದ ಆಸ್ಪತ್ರೆಗಳ ವೈದ್ಯರು, ನರ್ಸ್‌ಗಳು ಸೇರಿದಂತೆ 85 ಮಂದಿಗೆ ಟ್ಯಾಮಿಫ್ಲೂ ನೀಡಲಾಗಿದೆ. ಇದಲ್ಲದೆ ರಿದಾ ಕುಟುಂಬದ ಇತರ 31 ಮಂದಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಟ್ಯಾಮಿಫ್ಲೂ ನೀಡಲಾಗದೆ ಎಂದು ಸಚಿವರು ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ