ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತ.ನಾ: ಹಿಂದುತ್ವಕ್ಕೆ ಮರಳಿದ ದಲಿತ ಕ್ರಿಶ್ಚಿಯನ್ನರು (Tamil Nadu | Dalit Christian | Hinduism | VHP)
 
ಕ್ರೈಸ್ತಧರ್ಮವನ್ನು ಅಪ್ಪಿದ್ದ ಸುಮಾರು 200ಕ್ಕೂ ಅಧಿಕ ಮಂದಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿರುವ ಕುರಿತು ತಮಿಳ್ನಾಡಿನಿಂದ ವರದಿಯಾಗಿದೆ.

ದಿಂಡಿಗಲ್ ಸಮೀಪ ವಿಶ್ವಹಿಂದೂ ಪರಿಷತ್ ಸಂಘಟಿಸಿದ್ದ ಸಮಾರಂಭ ಒಂದರಲ್ಲಿ ಈ ಮರುಮತಾಂತರ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಇಲ್ಲಿಗೆ ಸಮೀಪದ ತಮರೈಕುಳಂ ಎಂಬಲ್ಲಿ ಸಂಘಟಿಸಲಾಗಿರುವ ಸಮಾರಂಭದಲ್ಲಿ 207 ಮಂದಿ ತಮ್ಮ ಮಾತೃ ಧರ್ಮಕ್ಕೆ ಮರಳಿದ್ದಾರೆ ಎಂಬುದಾಗಿ ವಿಶ್ವಹಿಂದೂ ಮೂಲಗಳು ಹೇಳಿವೆ.

ಕ್ರೈಸ್ತ ಧರ್ಮಕ್ಕೆ ಸೇರಿದ ತಮ್ಮನ್ನು ನಿರ್ಲಕ್ಷಿಸಲಾಗಿತ್ತು ಎಂಬ ದೂರುಗಳ ಹಿನ್ನೆಲೆಯಲ್ಲಿ ಅವರು ಹಿಂದೂಧರ್ಮಕ್ಕೆ ಮರಳಿದ್ದಾರೆ ಎಂದು ಹೇಳಲಾಗಿದೆ.

ಮಾತೃಧರ್ಮಕ್ಕೆ ಮರಳಿದವರಿಗೆ ವಿಶ್ವಹಿಂದೂ ಪರಿಷತ್ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿತು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ