ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಂದಿಜ್ವರದ ತಾಂಡವ: ಮಹಿಳೆ, ಬಾಲಕಿ ಸೇರಿ 10 ಬಲಿ (Swine flu | Sassoon Hospital | Vadodara | H1N1)
 
ನವದೆಹಲಿ: ಗುಜರಾತಿನ ವಡೋದರದಲ್ಲಿ ಏಳರ ಹರೆಯದ ಬಾಲಕಿ ಹಾಗೂ ಮುಂಬೈಯಲ್ಲಿ 63ರ ಹರೆಯದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಸ್ವೈನ್‌ಫ್ಲೂಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ರಾಷ್ಟ್ರದಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 10ಕ್ಕೆರಿದೆ.

ಗುಜರಾತಿನ ಆರ್ಯ ಎಂಬ ಬಾಲಕಿ ಬರೋಡದಲ್ಲಿ ಸಾವನ್ನಪ್ಪಿದ್ದು, ಗುಜರಾತಿನಲ್ಲಿ ಹಂದಿಜ್ವರದಿಂದ ಸತ್ತವರ ಸಂಖ್ಯೆ ಎರಡಕ್ಕೇರಿದೆ. ಅನಿವಾಸಿ ಭಾರತೀಯ ಉದ್ಯಮಿ 43ರ ಹರೆಯದ ಪ್ರವೀಣ್ ಪಟೇಲ್ ಎಂಬವರು ಭಾನುವಾರ ಸಾವನ್ನಪ್ಪಿದ್ದರು.

ಪಟೇಲ್ ಅವರು ಅಟ್ಲಾಂಟದಿಂದ ಜುಲೈ 31ರಂದು ಹಿಂದಿರುಗಿದ್ದರು. ಅವರನ್ನು ನ್ಯೂಮೋನಿಯಾಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಸಲಿಸಾಗಿತ್ತು. ಇದು ಸಹಜವಾದ ಫ್ಲೂ ಅಲ್ಲಎಂಬುದು ತಿಳಿಯುತ್ತಲೇ ಅಲ್ಲಿನ ವೈದ್ಯರು ಅವರನ್ನು ಸಿಟಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಅವರಿಗೆ ಹಂದಿಜ್ವರದ ಸೋಂಕು ತಗುಲಿರುವುದು ದೃಢವಾಗಿತ್ತು.

ಮುಂಬೈ ಮಹಿಳೆ ಸಾವು
ಇದೇ ವೇಳೆ ಮುಂಬೈನ ವಾರ್ಸಿಯಾ ಸಯೀದ ಎಂಬ ಥಾಣೆಯ ನಿವಾಸಿಯೂ ಮಂಗಳವಾರ ಅಪರಾಹ್ನ ಸಾವನ್ನಪ್ಪಿದರು. 63ರ ಹರೆಯದವರಾಗಿದ್ದ ಅವರನ್ನು ಬೈಕುಲ್ಲಾದ ನೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಹಲ್ಯಾದೇವಿ ಶಾಲೆಯ ವಿದ್ಯಾರ್ಥಿಯಾಗಿದ್ದ ಶೃತಿ ಗಾವಡೆ ಎಂಬ ಬಾಲಕಿ ಪುಣೆಯಲ್ಲಿ ಮಧ್ಯರಾತ್ರಿ ಸಾವನ್ನಪ್ಪಿದ್ದಳು.

ಸೋಮವಾರ ರಾತ್ರಿ 35 ರ ಹರೆಯದ ಸಂಜಯ್ ತಿಲೆಕಾರ್ ಎಂಬ ಫಾರ್ಮಾಸಿಸ್ಟ್ ಅವರು ಸಾವನ್ನಪ್ಪಿರುವ ಕುರಿತು ಸುದ್ದಿಯಾಗಿರುವ ಬೆನ್ನಿಗೆ ಶೃತಿಯ ಸಾವಿನ ಕುರಿತು ವರದಿಯಾಗಿದೆ. ಪುಣೆಯೊಂದರಲ್ಲೇ ಈ ರೋಗಕ್ಕೆ ಐದು ಮಂದಿ ಆಹುತಿಯಾಗಿದ್ದಾರೆ. ಚೆನ್ನೈನ ನಾಲ್ಕರ ಹರೆಯದ ಬಾಲಕನೊಬ್ಬನೂ ಸೋಮವಾರ ಹಂದಿಜ್ವರದಿಂದ ಸಾವನ್ನಪ್ಪಿದ್ದ
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ