ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಚ್1ಎನ್1 ರೋಗಿ ಪರಾರಿ: ತೀವ್ರ ಹುಡುಕಾಟ (Swine flu | victim | manhunt | H1N1)
 
WD
ಚಿಕಿತ್ಸೆಗಾಗಿ ದಾಖಲಾಗಿದ್ದ ಸತಾರ ಜಿಲ್ಲೆಯ ಆಸ್ಪತ್ರೆಯೊಂದರಿಂದ ಎಚ್1ಎನ್1 ಸೋಂಕು ಪೀಡಿತ ಹದಿಹರೆಯದ ವಿದ್ಯಾರ್ಥಿಯೊಬ್ಬ ಪರಾರಿಯಾಗಿದ್ದು, ಈತನ ಪತ್ತೆಗೆ ಮಹಾರಾಷ್ಟ್ರ ಪೊಲೀಸರು ಭಾರೀ ಹುಡುಕಾಟ ಆರಂಭಿಸಿದೆ. ಹಿಸ್ಸಾನ್ ಸುನ್‌ಹಿಯರ್ ಎಂಬ ವಿದ್ಯಾರ್ಥಿಯು ರೆಸಿಡೆನ್ಶಿಯಲ್ ಶಾಲೆಯಾಗಿರುವ ನ್ಯೂ ಎರಾ ಹೈಸ್ಕೂಲ್‌ನಲ್ಲಿ ದಾಖಲೆಗಾಗಿ ಆತ ಕಳೆದವಾರ ಗಿರಿಧಾಮವಾಗಿರುವ ಪಂಚಗಣಿಗೆ ತೆರಳಿದ್ದ.

ಆತನಲ್ಲಿ ಹಂದಿಜ್ವರದ ಲಕ್ಷಣಗಳು ಪತ್ತೆಯಾಗುತ್ತಲೇ, ಸತಾರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಮಾಮೂಲಿ ಪ್ರಕ್ರಿಯೆಯಂತೆ, ತಪಾಸಣಾ ಫಲಿತಾಂಶಗಳು ಬರುವತನಕ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಆತನಿಗೆ ಸಲಹೆ ಮಾಡಲಾಗಿತ್ತು" ಎಂದು ಸತಾರ ಜಿಲ್ಲಾಧಿಕಾರಿ ವಿಕಾಸ್ ದೇಶ್‌ಮುಖ್ ಅವರು ತಿಳಿಸಿದ್ದಾರೆ.

ಶೌಚಾಲಯಕ್ಕೆ ತೆರಳುವಂತೆ ನಟಿಸುತ್ತಾ ತೆರಳಿದ ಆತ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಆಸ್ಪತ್ರೆ ಅಧಿಕಾರಿಗಳು ಆತನ ವಿರುದ್ಧ ಪೊಲೀಸ್ ಕೇಸು ದಾಖಲಿಸಿದ್ದಾರೆ.

"ಸೋಮವಾರ ಸಾಯಂಕಾಲ ಆತನ ರಕ್ತದ ಮಾದರಿಯ ತಪಾಸಣೆಯಿಂದ ಆತನಿಗೆ ಸೋಂಕು ತಗುಲಿರುವುದು ಪತ್ತೆಯಾಗುತ್ತಿರುವಂತೆ ಕಾಣೆಯಾಗಿರುವ ಯುವಕನನ್ನು ಪತ್ತೆ ಹಚ್ಚುವಂತೆ ಪೊಲೀಸರನ್ನು ಎಚ್ಚರಿಸಲಾಗಿದೆ. ಈತ ಮುಂಬೈಯಲ್ಲಿ ಅಡಗಿದ್ದಾನೆ ಎಂಬುದಾಗಿ ಸಂಶಯಿಸಲಾಗಿದ್ದು ಪೊಲೀಸ್ ತಂಡ ಒಂದನ್ನು ಮುಂಬೈಗೆ ಕಳುಹಿಲಾಗಿದೆ. ಆತ ರೋಗವನ್ನು ಇನ್ನಷ್ಟು ಮಂದಿಗೆ ಹಬ್ಬಿಸುವ ಮುಂಚಿತವಾಗಿ ಆತನನ್ನು ಹಿಡಿದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾಗಿದೆ" ಎಂಬುದಾಗಿ, ವಿದ್ಯಾರ್ಥಿಯ ವರ್ತನೆಯಿಂದ ಕಳವಳಗೊಂಡಿರುವ ದೇಶ್‌ಮುಖ್ ಹೇಳಿದ್ದಾರೆ.

ಜನರು ಹಂದಿಜ್ವರದ ಭೀತಿಯಿಂದ ಬಳಲುತ್ತಿರುವಾಗ ಈ ವಿದ್ಯಾರ್ಥಿಯ ಇಂತಹ ವರ್ತನೆಯು ತೀವ್ರ ಕಳವಳಕಾರಿಯಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ