ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಂಗಳೂರಿಗೆ ಪಾಸ್ಪೋರ್ಟ್ ಸೇವಾ ಕೇಂದ್ರ (Bangalore | PSK | External Affairs | Shashi Tharoor)
 
ಸರ್ಕಾರವು ರಾಷ್ಟ್ರದ ವಿವಿಧ ಭಾಗಗಳಲ್ಲಿ 77 'ಪಾಸ್ಪೋರ್ಟ್ ಸೇವಾ ಕೇಂದ್ರ'ಗಳನ್ನು ತೆರೆಯಲಿದ್ದು, ಇದರಂಗವಾಗಿ ಮೊದಲ ಪೈಲಟ್ ಪ್ರಾಜೆಕ್ಟ್‌ಗಳು ಬೆಂಗಳೂರು ಮತ್ತು ಚಂಢೀಗಢದಲ್ಲಿ ಕಾರ್ಯಾರಂಭಿಸಲಿದೆ ಎಂಬುದಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ಹೇಳಿದ್ದಾರೆ.

ಮೊದಲ ಈ ಪಾಸ್ಪೋರ್ಟ್ ಕೇಂದ್ರಗಳ ಕಾರ್ಯಾಚರಣೆಗಳನ್ನು ಗಮನಿಸಿದ ಬಳಿಕ ವಿವಿಧ ಹಂತಗಳಲ್ಲಿ ಇತರ ಕೇಂದ್ರಗಳನ್ನು ಮುಂದಿನ ವರ್ಷ ಆರಂಭಗೊಳಿಸಲಾಗುವುದು ಎಂದು ತರೂರ್ ಹೇಳಿದ್ದಾರೆ. ಅವರು ಪಾಸ್ಪೋರ್ಟ್ ಅಧಿಕಾರಿಗಳ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಕೇರಳದಲ್ಲಿ 13 ಕೇಂದ್ರಗಳನ್ನು ಆರಂಭಿಸಲಾಗುವುದು ಈ ಕೇಂದ್ರಗಳು ಪಾಸ್ಪೋರ್ಟ್ ಅರ್ಜಿಗಳ ಸಂಸ್ಕರಣ ಮಾಡಲಿದ್ದು ಬಳಿಕ ಮುಂದಿನ ಹೆಜ್ಜೆಗಾಗಿ ಪ್ರಾದೇಶಿಕ ಕಚೇರಿಗಳಿಗಾಗಿ ಕಳುಹಿಸಲಿವೆ.

ಪಾಸ್ಪೋರ್ಟ್ ಅರ್ಜಿದಾರರಿಂದ ಹಣ ಕೀಳುವ ದಲ್ಲಾಳಿಗಳನ್ನು ನಿವಾರಿಸಲು ಪೊಲೀಸ್ ಪಡೆಯ ಸಹಾಯ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. ಮತ್ತು ಪಾಸ್ಪೋರ್ಟಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಗೆ ಉತ್ತರಿಸಲು ರಾಷ್ಟ್ರ ಮಟ್ಟದಲ್ಲಿ ಎರಡು ಕಾಲ್ ಸೆಂಟರ್ ಗಳನ್ನು ತೆರೆಯುವ ಯೋಜನೆಯೂ ಇದೆ ಅವರು ಹೇಳಿದ್ದಾರೆ.

ಬಯೋಮೆಟ್ರಿಕ್ ಪಾಸ್ಪೋರ್ಟ್ ವಿಚಾರ ಪ್ರಸ್ತಾಪಿಸಿದ ಅವರು ಮುಂಬರುವ ಜೂನ್‌ನಿಂದ ಬಯೋಮೆಟ್ರಿಕ್ ಪಾಸ್ಪೋರ್ಟ್‌ಗಳನ್ನು ವಿತರಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ನುಡಿದರು.

• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ