ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆಯ ಇನ್ನೊಬ್ಬ ವ್ಯಕ್ತಿ ಹಂದಿಜ್ವರದಿಂದ ಸಾವು (Swine flu | H1N1 | ARDS | Sassoon hospital)
 
ಪುಣೆಯಲ್ಲಿ ಇನ್ನೊಬ್ಬ ವ್ಯಕ್ತಿ ಹಂದಿಜ್ವರಕ್ಕೆ ಬುಧವಾರ ಬಲಿಯಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಇವರು ಪುಣೆಯ ಸಸೂನ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದಾಗಿ ಪುಣೆಯಲ್ಲಿ ಸತ್ತವರ ಸಂಖ್ಯೆ ಎಂಟಕ್ಕೇರಿದ್ದರೆ, ರಾಷ್ಟ್ರದಲ್ಲಿ ಸತ್ತವರ ಒಟ್ಟು ಸಂಖ್ಯೆ 15ಕ್ಕೇರಿತು.

ರಾಕೇಶ್ ಗಾಂಗ್ರುಡೆ ಎಂಬ 33ರ ಹರೆಯದ ನಾಸಿಕ್‌ನ ವೈದ್ಯರೊಬ್ಬರು ಬುಧವಾರ ಮುಂಜಾನೆ ಸಾವನ್ನಪ್ಪುವುದರೊಂದಿಗೆ ಹಂದಿಜ್ವರ ಎಂಬ ಮಹಾಮಾರಿಗೆ ರಾಷ್ಟ್ರದಲ್ಲಿ ಬಲಿಯಾದರವರ ಒಟ್ಟು ಸಂಖ್ಯೆ 14ಕ್ಕೇರಿತ್ತು. ಇದಕ್ಕೂ ಮುಂಚಿತವಾಗಿ ಬುಧವಾರ ನಸುಕಿನಲ್ಲಿ ಪುಣೆಯ 29ರ ಹರೆಯದ ಶ್ರವಣಿ ದೇಶಪಾಂಡೆ ಎಂಬವರು ಸಾವನ್ನಪ್ಪಿದ್ದರು.

ಶ್ರವಣಿ ಅವರು ಪುಣೆಯ ಸಸೂನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಎರಡು ಗಂಟೆಗೆ ಮುಂಚಿತವಾಗಿ 35ರ ಹರೆಯದ ಸಂಜಯ್ ಮಿಸ್ಟ್ರಿ ಎಂಬವರು ಸಾವನ್ನಪ್ಪಿದ್ದರು. ಸಂಜಯ್ ಅವರನ್ನು ಇದಕ್ಕೂ ಮುಂಚಿತವಾಗಿ ವೀರಮಾಯಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ವೆಂಟಿಲೇಟರ್ ಅಳವಡಿಸಲಾಗಿತ್ತು.

ಕೇರಳದಲ್ಲಿ ಮೊದಲ ಸಾವು
35ರ ಹರೆಯದ ವಿಲ್ಸನ್ ಎಂಬವರು ತಿರುವನಂತಪುರಂನ ಕೇರಳ ವೈದ್ಯಕೀಯ ಕಾಲೇಜಿನಲ್ಲಿ ಸಾವ್ನಪ್ಪಿದ್ದಾರೆ. ವಿಲ್ಸನ್ ಅವರು ಕೊಲ್ಲಿ ರಾಷ್ಟ್ರದಿಂದ ಮರಳಿದ್ದು, ಇತ್ತೀಚೆಗೆ ತಮಿಳ್ನಾಡಿಗೆ ಪ್ರಯಾಣಿಸಿದ್ದರು. ಅವರಲ್ಲಿ ಜ್ವರ ಕಾಣಿಸಿಕೊಂಡಿದ್ದು ಆರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ